ದೇಶ

ಜೆಟ್ ಏರ್ ವೇಸ್ ವಿಮಾನದ ಟಾಯ್ಲೆಟ್ ನಲ್ಲಿ 8 ಕೆಜಿ ಚಿನ್ನ ಪತ್ತೆ

ಯುಯಾನ ಗುಪ್ತಚರ ಇಲಾಖೆ ಅಧಿಕಾರಿಗಳು ಸುಮಾರು 2ಕೋಟಿ ರೂ. ಮೌಲ್ಯದ 8 ಕೆ.ಜಿ ಚಿನ್ನವನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.

ಜೆಟ್ ಏರ್ ವೇಸ್ ವಿಮಾನದ ಟಾಯ್ಲೆಟ್ ನಲ್ಲಿ 8 ಕೆಜಿ ಚಿನ್ನ ಪತ್ತೆ
ಚಿನ್ನದ ಬಿಸ್ಕತ್ಸ್
Published On :

ಮುಂಬಯಿ: ವಾಯುಯಾನ ಗುಪ್ತಚರ ಇಲಾಖೆ ಅಧಿಕಾರಿಗಳು ಸುಮಾರು 2ಕೋಟಿ ರೂ. ಮೌಲ್ಯದ 8 ಕೆ.ಜಿ ಚಿನ್ನವನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.
ಜೆಟ್ ಏರ್ ವೇಸ್  ವಿಮಾನದ ಶೌಚಾಲಯದಲ್ಲಿ 8 ಕೆಜಿ ಚಿನ್ನ ವಶಕ್ಕೆ ಪಡೆದು ಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ಚಿನ್ನ ಕಳ್ಳ ಸಾಗಣ ಆರೋಪದಡಿ ಪ್ರಯಾಣಿಕರೊಬ್ಬರನ್ನು ಬಂಧಿಸಿದ್ದಾರೆ.

ಮಸ್ಕಟ್ ನಿಂದ ಮುಂಬಯಿಗೆ ಬರುತ್ತಿದ್ದ ಜೆಟ್ ಏರ್ ವೇಸ್ ನ 9 ಡಬ್ಲ್ಯೂ-539 ವಿಮಾನದಲ್ಲಿ ಒಂದೊಂದು ಕೆಜಿ ತೂಕದ 8 ಚಿನ್ನದ ಬಾರ್ ಗಳಿವೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಸೆಗು ನೈನಾ ಎಂಬ ಪ್ರಯಾಣಿಕನನ್ನು ವಿಚಾರಣೆ ನಡೆಸಿದಾಗ ಬಾಯ್ಬಿಟ್ಟಿದ್ದಾನೆ. ಮುಂಬಯಿಯಿಂದ ಕೊಲ್ಕೋತ್ತಾಗೆ ಸಾಗಿಸಲು ಯೋಜಿಸಲಾಗಿತ್ತು ಎಂದು ತಿಳಿಸಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.