2014 -15 ರಲ್ಲಿ ರಾಜಭವನ ನವೀಕರಣಕ್ಕೆ ಖರ್ಚಾಗಿದ್ದು 4 ಕೋಟಿ!
ರಾಜಭವನ ನವೀಕರಣಕ್ಕಾಗಿ 2014 -15 ನೇ ಸಾಲಿನಲ್ಲಿ 4 ಕೋಟಿ ರೂಪಾಯಿ ವೆಚ್ಚವಾಗಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ

ಬೆಂಗಳೂರು: ರಾಜಭವನ ನವೀಕರಣಕ್ಕಾಗಿ 2014 -15 ನೇ ಸಾಲಿನಲ್ಲಿ 4 ಕೋಟಿ ರೂಪಾಯಿ ವೆಚ್ಚವಾಗಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಒಂದೇ ವರ್ಷದಲ್ಲಿ ನವೀಕರಣ ಕಾಮಗಾರಿಗೆ 4 ಕೋಟಿ ರೂಪಾಯಿ ವೆಚ್ಚವಾಗಿದ್ದು, ಈ ಪೈಕಿ 7 ಸಿವಿಲ್ ಕಾಮಗಾರಿಗಳಿಗೆ 3 ಕೋಟಿ ರೂಪಾಯಿ ವೆಚ್ಚವಾಗಿದ್ದರೆ 1 ಕೋಟಿ ರೂ ವೆಚ್ಚದಲ್ಲಿ 18 ವಿದ್ಯುತ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರಾಜಭವನ ಆವರಣದ ಕಟ್ಟಡಗಳ ಸುಧಾರಣೆಗಾಗಿ ರಾಜ್ಯಪಾಲರ ಕಾರ್ಯದರ್ಶಿ 2014 ರ ಜೂನ್.17 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಆಡಳಿತಾತ್ಮಕ ಅ ನುಮೋದನೆಯೂ ದೊರೆತಿತ್ತು.
ಲೋಕೋಪಯೋಗಿ ಇಲಾಖೆ ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿರುವ ಮಾಹಿತಿಯಂತೆ ರಾಜ್ಯಪಾಲರು ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನ ಹಾಗೂ ಪ್ರಧಾನ ಮಂತ್ರಿ ಕಚೇರಿಗೆ ಭೇಟಿ ನೀಡಿದ ಬಳಿಕ ತಮ್ಮ ಕಚೇರಿ ಹಾಗೂ ನಿವಾಸಗಳನ್ನು ಅಭಿವೃದ್ಧಿಪಡಿಸಲು ಇಚ್ಛಿಸಿದ್ದರು. ರಾಜಭವನದ ಘನತೆಗೆ ತಕ್ಕಂತೆ ಹಾಲಿ ಇರುವ ರಾಜ್ಯಪಾಲರ ನಿವಾಸ, ಕಚೇರಿ ಕಟ್ಟಡಗಳನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ರಾಜ್ಯಪಾಲರ ಕಾರ್ಯದರ್ಶಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂದು ತಿಳಿದುಬಂದಿದೆ. ನವೀಕರಣ ಕಾಮಗಾರಿಗಳನ್ನು ಕೈಗೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ-299 ರ ಕಲಂ 4 (ಜಿ ಅಡಿ ಟೆಂಡರ್ ನಿಂದ ವಿನಾಯಿತಿಯನ್ನು ಸಹ ನೀಡಲಾಗಿದೆ.
ಯಾವುದಕ್ಕೆ ಎಷ್ಟು ವೆಚ್ಚ?
*ರಾಜ್ಯಪಾಲರ ಕಚೇರಿ, ಎಡಿಸಿ ಕಚೇರಿಗೆ ಮರದ ಹಾಸು, ಗ್ಲಾಸ್ ಡೋರ್, ಪೇಂಟಿಂಗ್ ಕೆಲಸ, ಡೋರ್ ಫಿಟ್ಟಿಂಗ್ ಗಾಗಿ 40 ಲಕ್ಷ
* ವಿಶೇಷಾಧಿಕಾರಿ, ಆಪ್ತ ಕಾರ್ಯದರ್ಶಿ ಕೊಠಡಿ, ಮುಖ್ಯ ಮೊಗಸಾಲೆಯಲ್ಲಿ ಫಾಲ್ಸ್ ಸೀಲಿಂಗ್, ಮರದ ಹಾಸು ಗ್ಲಾಸ್ ಡೋರ್, ಮರದ ಕೆಲಸ, ಪೇಂಟಿಂಗ್- 30 ಲಕ್ಷ
*ಟೆಲಿಫೋನ್ ಎಕ್ಸ್ ಚೇಂಜ್, ಕಂಪ್ಯೂಟರ್ ವಿಭಾಗ, ಔಷಧ ಮಳಿಗೆ, ಎಡಿಎಂ ಬ್ಲಾಕ್, ವಿಶ್ವವಿದ್ಯಾಲಯ ವಿಭಾಗದ ಮಾರ್ಪಾಡು- 25 ಲಕ್ಷ
*ಆವರಣದಲ್ಲಿ ಕಲ್ಲು ಹಾಸು ಅಳವಡಿಕೆ, ಇತರೆ ಕೆಲಸಗಳಿಗೆ- 35 ಲಕ್ಷ
*ಅಡುಗೆ ಮನೆ, ಊಟದ ಕೊಠಡಿ ಶೌಚಾಲಯದಲ್ಲಿ ಗ್ರಾನೈಟ್, ಟೈಲ್ಸ್, ಫಾಲ್ಸ್ ರೂಫಿಂಗ್, ಇತರೆ ಕಾಮಗಾರಿಗಳಿಗೆ- 50 ಲಕ್ಷ
*ಗ್ಲಾಸ್ ಹೌಸ್, ಬ್ಯಾಂಕ್ವೆಟ್ ಹಾಲ್, ವಾಹನ ಪಾರ್ಕಿಂಗ್ ಗೆ ಮೇಲ್ಛಾವಣಿ- 50 ಲಕ್ಷ
* ರಾಜ್ಯಪಾಲರ ಉಪಯೋಗಕ್ಕಾಗಿ ರೂ.15 ಲಕ್ಷ ವೆಚ್ಚದ ಎಲ್.ಜಿ ಅಲ್ಟ್ರಾ ಹೆಚ್.ಡಿ 3 ಡಿ ಟಿ.ವಿ ಖರೀದಿಗೆ 15 ಲಕ್ಷ
*ಮುಖ್ಯ ಕಟ್ಟಡ ಹಿಂಭಾಗದ ಪಾದಚಾರಿ ಮಾರ್ಗದ ಮುಂದುವರಿಕೆ, ಕ್ವಾರ್ಟಸ್ ಗಳಲ್ಲಿ ವಿವಿಧ ಕಾಮಗಾರಿಗೆ- 50 ಲಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


