ಚೀನಾದ ಅಣು ಜಲಾಂತರ್ಗಾಮಿ ಭೀತಿ: ನೌಕಾಪಡೆ ಹೈಅಲರ್ಟ್
ಹಿಂದೂ ಮಹಾಸಾಗರದಲ್ಲಿ ಚೀನಾದ ಅಣುಚಾಲಿತ ಜಲಾಂತರ್ಗಾಮಿಯೊಂದರ ಉಪಸ್ಥಿತಿ ಬಗ್ಗೆ ಸುಳಿವು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ಅಲರ್ಟ್ ಆಗಿದೆ...

ನವದೆಹಲಿ: ಹಿಂದೂ ಮಹಾಸಾಗರದಲ್ಲಿ ಚೀನಾದ ಅಣುಚಾಲಿತ ಜಲಾಂತರ್ಗಾಮಿಯೊಂದರ ಉಪಸ್ಥಿತಿ ಬಗ್ಗೆ ಸುಳಿವು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ಅಲರ್ಟ್
ಆಗಿದೆ.
ಹೀಗೆಂದು ಖಾಸಗಿ ಸುದ್ದಿವಾಹಿನಿ ವರದಿ ಮಾಡಿದೆ. ಸೊಮಾಲಿಯಾ ಸಮುದ್ರದಾಚೆ ಕಡಲ್ಗಳ್ಳರ ನಿಗ್ರಹಕ್ಕಾಗಿ ಸಬ್‍ಮರಿನ್ ಅನ್ನು ನಿಯೋಜಿಸಿರಬಹುದು ಎಂಬ ಊಹೆಯನ್ನು ತಳ್ಳಿಹಾಕಿರುವ ನೌಕಾಪಡೆ, ಈ ಬಗ್ಗೆ ಎಚ್ಚರಿಕೆ ವಹಿಸಿರುವುದಾಗಿ ತಿಳಿಸಿದೆ. ಕಳೆದ ಕೆಲ ತಿಂಗಳುಗಳಿಂದ ಚೀನಾದ ಸಬ್‍ಮರಿನ್‍ವೊಂದು ಹಿಂದೂ ಮಹಾಸಾಗರದಲ್ಲಿದೆ ಎಂಬ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ಪತ್ತೆ ಮಾಡಿದಾಗ, ಭಾರತದ ಜಲಗಡಿಯ ಮೇಲೆ ಕಣ್ಣಿಡುತ್ತಿರುವ ಯಾವುದೇ ಸಬ್‍ಮರಿನ್ ಪತ್ತೆಯಾಗಿಲ್ಲ.
ಆದರೆ, ಶೀತಲ ಸಮರದ ಸಂದರ್ಭದಂತೆ ಈಗಲೂ ಯಾವುದೋ ದೊಡ್ಡ ಜಲಾಂತರ್ಗಾಮಿ ಕುತಂತ್ರ ನಡೆಯುತ್ತಿದೆ ಎಂಬ ಅನುಮಾನವಿದೆ. ಈ ಹೊಸ ಸಬ್‍ಮರಿನ್ ಕಪಟ ಆಟದಲ್ಲಿ
ಚೀನಾದ ಹೊಸ ವಿಧದ 093 ಶಾಂಗ್ ದರ್ಜೆಯ ತ್ವರಿತ ದಾಳಿಯ ಅಣು ಸಬ್ ಮರಿನ್ ಪ್ರಮುಖ ಪಾತ್ರ ವಹಿಸಿರಬಹುದು. ಇಂತಹ ಕನಿಷ್ಠ 6 ಸಬ್‍ಮರಿನ್‍ಗಳನ್ನು ಚೀನಾ ಅಭಿವೃದ್ಧಿಪಡಿಸಿರಬಹುದು ಅಥವಾ ನಿಯೋಜಿಸಿರಲೂಬಹುದು ಎಂದೂ ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


