ಹೇಡಿತನವೇ ಆರ್ ಎಸ್ಎಸ್ ನ ನಿಜಗುಣ: ರಾಹುಲ್ ಗಾಂಧಿ
ಆರ್ ಎಸ್ಎಸ್ ವಿದ್ಯಾರ್ಥಿಗಳಿಗೆ ಹೆದರುತ್ತಿದೆ. ಹೇಡಿತನವೇ ಅದರ ನಿಜವಾದ ಸ್ವರೂಪವಾಗಿದ್ದು, ಎಫ್ ಟಿಐಐ ವಿವಾದ ವಿಷಯವಿಡಿದುಕೊಂಡು ಕಳಪೆ ಮಟ್ಟದ ಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ...

ಪುಣೆ: ಆರ್ ಎಸ್ಎಸ್ ವಿದ್ಯಾರ್ಥಿಗಳಿಗೆ ಹೆದರುತ್ತಿದೆ. ಹೇಡಿತನವೇ ಅದರ ನಿಜವಾದ ಸ್ವರೂಪವಾಗಿದ್ದು, ಎಫ್ ಟಿಐಐ ವಿವಾದ ವಿಷಯವಿಡಿದುಕೊಂಡು ಕಳಪೆ ಮಟ್ಟದ ಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ.
ಈ ಕುರಿತಂತೆ ಇಂದು ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಗೆ ಭೇಟಿ ನೀಡಿ ಮಾತನಾಡಿರುವ ಅವರು, ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಉನ್ನತ ಅಧಿಕಾರಿಗಳ ಮಧ್ಯೆ ಕೂರಿಸಲಾಗುತ್ತಿದೆ. ಆರ್ ಎಸ್ಎಸ್ ಸಂಘಟನೆಯು ತನ್ನ ಶಕ್ತಿ ಬಳಸಿಕೊಂಡು ಕಳಪೆ ಮಟ್ಟದ ಪ್ರಚಾರ ಮಾಡುತ್ತಿದೆ ಎಂದು ಹೇಳಿದ್ದಾರೆ.
ಇಷ್ಟಕ್ಕೂ ಎಫ್ ಟಿಐಐ ಕುರಿತ ವಿದ್ಯಾರ್ಥಿಗಳ ಪ್ರತಿಭಟನೆಗೆ ಸರ್ಕಾರ ಏಕೆ ವಿರೋಧಿಸುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಎಫ್ ಟಿಐಐ ಅಧ್ಯಕ್ಷ ನೇಮಕ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನೇ ಆರ್ ಎಸ್ಎಸ್ ಹಿಂದೂ ವಿರೋಧಿಗಳು ಎಂದು ಕರೆಯುತ್ತಿದೆ. ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆರ್ಎಸ್ಎಸ್ ಹೆದರುತ್ತಿದ್ದು, ದೇಶದೆಲ್ಲೆಡೆ ಆರ್ಎಸ್ಎಸ್ ಗುಂಡಾಗಳು ಹಾಗೂ ರೌಡಿಗಳಂತೆ ವರ್ತಿಸುತ್ತಿದೆ. ಎಫ್ ಟಿಐಐ ಅಧ್ಯಕ್ಷ ನೇಮಕಾತಿ ನಿರ್ಧಾರವನ್ನು ನರೇಂದ್ರ ಮೋದಿ ಅವರೇ ಕೈಗೊಂಡಿದ್ದರೆ, ಈ ನಿರ್ಧಾರದಿಂದ ಬಿಜೆಪಿ ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (ಎಫ್ ಟಿಐಐ) ಅಧ್ಯಕ್ಷರಾಗಿ ಗಜೇಂದ್ರ ಚೌಹಾಣ್ ಅವರನ್ನು ನೇಮಕ ಮಾಡಿರುವುದನ್ನು ವಿರೋಧಿಸಿ ಚಲನಚಿತ್ರ ಕಲಾವಿದರು ಹಾಗೂ ಎಫ್ ಟಿಐಐ ನ ವಿದ್ಯಾರ್ಥಿಗಳು ಪ್ರತಿಭಟನೆಗಳಿದಿದ್ದವು. ದಿನಕಳೆದಂತೆ ಈ ಕುರಿತಂತೆ ಪ್ರತಿಭಟನೆಗಳು ಕಾವೇರುತ್ತಿದ್ದು, ಎಲ್ಲೆಡೆ ಗಜೇಂದ್ರ ಚೌಹಾಣ್ ನೇಮಕ ವಿರುದ್ಧ ಕೂಗು ಕೇಳಿಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


