ಐತಿಹಾಸಿಕ ಭೂ ಗಡಿ ಒಪ್ಪಂದ: ಭಾರತ, ಬಾಂಗ್ಲಾ ಭೂಭಾಗ ಹಸ್ತಾಂತರ ಪ್ರಕ್ರಿಯೆ ಆರಂಭ
ಭಾರತ ಮತ್ತು ಬಾಂಗ್ಲಾದೇಶ ನಡುವೆ 41 ವರ್ಷಗಳಿಂದ ಜೀವ ಉಳಿಸಿಕೊಂಡು ಬಂದಿರುವ ಗಡಿ ವಿವಾದವನ್ನು ಕೊನೆಗಾಣಿಸಿದ ಐತಿಹಾಸಿಕ ಭೂ ಗಡಿ...

ಕೊಲ್ಕತ್ತಾ/ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವೆ 41 ವರ್ಷಗಳಿಂದ ಜೀವ ಉಳಿಸಿಕೊಂಡು ಬಂದಿರುವ ಗಡಿ ವಿವಾದವನ್ನು ಕೊನೆಗಾಣಿಸಿದ ಐತಿಹಾಸಿಕ ಭೂ ಗಡಿ ಒಪ್ಪಂದದ ಪ್ರಕಾರ ಭಾರತದ ಭೂಭಾಗವನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರ ಮಾಡಿ ಅಲ್ಲಿನ ಪರಾವೃತ ಪ್ರದೇಶವನ್ನು ಸ್ವೀಕರಿಸಲಿದೆ. ಭಾರತ ಮತ್ತು ಬಾಂಗ್ಲಾದೇಶದ ಪಾಲಿಗಿದು ಐತಿಹಾಸಿಕ ದಿನ.
ಕಳೆದ ಮೇ ತಿಂಗಳಲ್ಲಿ ಪ್ರಸ್ತುತ ಒಪ್ಪಂದ ಸಾಂವಿಧಾನಿಕ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆ ಮತ್ತು ರಾಜ್ಯ ಸಭೆ ಅಸ್ತು ಎಂದಿತ್ತು. ಭಾರತದ ಕೆಲವು ಭೂಭಾಗವನ್ನು ಭಾರತಕ್ಕೆ ಹಸ್ತಾಂತರಿಸಿ,ಆ ದೇಶದ ಕೆಲವು ಭಾಗವನ್ನು ಖರೀದಿಸುವ ಪ್ರಸ್ತಾಪವನ್ನು ಈ ವಿಧೇಯಕದಲ್ಲಿ ಸೇರಿಸಲಾಗಿತ್ತು.
ಶುಕ್ರವಾರ ಭಾರತ 7,110 ಎಕರೆಯಷ್ಟಿರುವ 51 ಪರಾವೃತ ಪ್ರದೇಶಗಳನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಲಿದೆ. ಇದರ ಬದಲಿಗೆ ಬಾಂಗ್ಲಾದೇಶವು 17, 160 ಎಕರೆಗಳಿಷ್ಟಿರುವ 111 ಪರಾವೃತ ಪ್ರದೇಶಗಳನ್ನು ಭಾರತಕ್ಕೆ ನೀಡಲಿದೆ.
ಭಾರತವೀಗ ಬಾಂಗ್ಲಾದೇಶಕ್ಕೆ ಹಸ್ತಾಂತರಿಸಿರುವ ಪರಾವೃತ ಪ್ರದೇಶದಲ್ಲಿ ಸುಮಾರು 37,000 ಜನ ವಾಸಿಸುತ್ತಿದ್ದಾರೆ. ಅದೇ ವೇಳೆ ಬಾಂಗ್ಲಾದೇಶ ಹಸ್ತಾಂತರಿಸಿರುವ ಪರಾವೃತ ಪ್ರದೇಶದಲ್ಲಿ 14,000 ಜನರು ವಾಸಿಸುತ್ತಿದ್ದಾರೆ.
ಹೀಗೆ ಹಸ್ತಾಂತರಗೊಂಡ ಪ್ರದೇಶಗಳಲ್ಲಿ ವಾಸಿಸುವ ಜನರು ಬಾಂಗ್ಲಾದ ಪೌರತ್ವ ಸ್ವೀಕರಿಸುತ್ತಾರೋ ಅಥವಾ ಭಾರತದ ಪೌರತ್ವ ಸ್ವೀಕರಿಸುತ್ತಾರೋ ಎಂಬ ಜನರ ಆಯ್ಕೆ ಬಗ್ಗೆ ಉಭಯ ರಾಷ್ಟ್ರಗಳ ಜೂನ್ ತಿಂಗಳಲ್ಲಿಯೇ ಕಾರ್ಯ ಪ್ರವೃತ್ತವಾಗಿದ್ದವು.
ಬಾಂಗ್ಲಾದೇಶದ ಪರಾವೃತ ಪ್ರದೇಶದಲ್ಲಿ ವಾಸಿಸುವ ಭಾರತೀಯರ್ಯಾರೂ ಬಾಂಗ್ಲಾದೇಶದ ಪೌರತ್ವ ಸ್ವೀಕರಿಸಲು ತಯಾರಾಗಿಲ್ಲ ಎಂದು ಉಭಯ ರಾಷ್ಟ್ರಗಳ ನಡೆಸಿದ ಸಮೀಕ್ಷೆಯಲ್ಲಿ ಹೇಳಲಾಗಿದೆ. ಆದಾಗ್ಯೂ 600 ಜನರು ಬಾಂಗ್ಲಾದಿಂದ ಭಾರತಕ್ಕೆ ವಲಸೆ ಬರಲು ತಯಾರಾಗಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಭೂ ಗಡಿ ಒಪ್ಪಂದದ ಪ್ರಕಾರ ಪರಾವೃತ ಪ್ರದೇಶಗಳನ್ನು ಹಸ್ತಾಂತರಿಸುವಾಗ ಅಲ್ಲಿನ ಜನರ ಪುನರ್ವಸತಿಗಾಗಿ ಕೇಂದ್ರ ಸರ್ಕಾರ ಈಗಾಗಲೇ ರು. 3,048 ಕೋಟಿ ಧನ ಸಹಾಯ ನೀಡಿದೆ.
ಜುಲೈ 31, 2015 ರಿಂದ ಜೂನ್ 30, 2016 ರ ಅವಧಿಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಪರಾವೃತ ಪ್ರದೇಶ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


