ಅನಗತ್ಯವಾಗಿ ಸುದ್ದಿಯಾಗುತ್ತಿರುವ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್
ಅಜ್ಜಿಗೆ ಅರಿವೆ ಚಿಂತೆ...ಮೊಮ್ಮಗಳಿಗೆ ಮದುವೆ ಚಿಂತೆ ಅನ್ನೋ ಆಗಿದೆ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ನಡೆ....

ನವದೆಹಲಿ: ಅಜ್ಜಿಗೆ ಅರಿವೆ ಚಿಂತೆ...ಮೊಮ್ಮಗಳಿಗೆ ಮದುವೆ ಚಿಂತೆ ಅನ್ನೋ ಆಗಿದೆ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ನಡೆ. ಹೌದು ಇಡೀ ದೇಶವೇ ಮಾಜಿ ರಾಷ್ಟ್ರಪತಿ ಹಾಗೂ ಮಕ್ಕಳ ಪ್ರೀತಿಯ ತಾತ ಡಾ. ಅಬ್ದುಲ್ ಕಲಾಂ ಅವರನ್ನು ಕಳೆದು ಕೊಂಡು ಶೋಕದಲ್ಲಿ ಮುಳುಗಿರುವಾಗ, ಇನ್ನೊಬ್ಬ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅನಗತ್ಯವಾಗಿ ಖ್ಯಾತೆ ತೆಗೆಯುತ್ತಿದ್ದಾರೆ.
ಮಾಧ್ಯಮಗಳ ವರದಿ ಪ್ರಕಾರ ಪ್ರತಿಭಾ ಪಾಟೀಲ್ ತಮ್ಮ ಪ್ರಯಾಣದ ಇಂಧನ ಭತ್ಯೆ ತುಂಬಿಕೊಡುವುದರ ಜೊತೆಗೆ ತಮಗೆ ಸರ್ಕಾರಿ ವಾಹನ ನೀಡುವುದು ಸೇರಿದಂತೆ ತಮ್ಮ ಖಾಸಗಿ ವಾಹನದಲ್ಲಿ ಸಂಚರಿಸಲು ಅನುವು ಮಾಡಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸರ್ಕಾರದ ನಿಯಮದ ಪ್ರಕಾರ ಮಾಜಿ ರಾಷ್ಟ್ರಪತಿಯಾದವರಿಗೆ ಇಂಧನ ಭತ್ಯೆ ನೀಡಬಹುದು ಇಲ್ಲವೇ ಸರ್ಕಾರಿ ಕಾರು ಬಳಸಬಹುದಾಗಿದೆ. ಆದರೆ ಪ್ರತಿಭಾ ಪಾಟೀಲ್ ತಮ್ಮಸ್ವಂತ ವಾಹನ ಬಳಕೆ ಜೊತೆಗೆ ಸರ್ಕಾರಿ ವಾಹನ ಸೌಲಭ್ಯ ಒದಗಿಸುವಂತೆ ಕೇಳಿದ್ದಾರೆ. ಹಾಗೂ ಇಂಧನ ಭತ್ಯೆ ಭರಿಸಲು ಸರ್ಕಾರಕ್ಕೆ ತಿಳಿಸಿದ್ದಾರೆ.
ಎರಡೆರಡು ರೀತಿ ಸೌಲಭ್ಯ ಒದಗಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ರಾಷ್ಟ್ರಪತಿಯಾಗಿದ್ದಾಗ ಬಂದಿದ್ದ ಉಡುಗೊರೆಗಳನ್ನು ತಮ್ಮ ಮನೆಗೆ ಸಾಗಿಸಿದ ಅರೋಪ ಕೂಡ ಪ್ರತಿಭಾ ಪಾಟೀಲ್ ಮೇಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


