ದೇಶ

ಅನುಷ್ಕಾ ಶರ್ಮಾಗೆ ಅಬ್ದುಲ್ ಕಲಾಂ ಯಾರೆಂದು ಗೊತ್ತಿಲ್ಲ!

ಅನುಷ್ಕಾ ಶರ್ಮಾಳ ಪೆದ್ದುತನವೀಗ ಸೋಷ್ಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದೆ. ಅದೇನಪ್ಪಾ ಅಂದ್ರೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ...

ಅನುಷ್ಕಾ ಶರ್ಮಾಗೆ ಅಬ್ದುಲ್ ಕಲಾಂ ಯಾರೆಂದು ಗೊತ್ತಿಲ್ಲ!
ಅನುಷ್ಕಾ ಶರ್ಮಾ
Published On :

ಮುಂಬೈ: ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರಣ್ ಜೋಹರ್ ಕೇಳಿದ ಜನರಲ್ ನಾಲೆಡ್ಜ್ ಪ್ರಶ್ನೆಗಳಿಗೆ ತಪ್ಪು ತಪ್ಪಾಗಿ ಉತ್ತರಕೊಟ್ಟು ಬಾಲಿವುಡ್ ನಟಿ ಆಲಿಯಾ ಭಟ್ ಸಾಮಾಜಿಕ ತಾಣಗಳಲ್ಲಿ ನಗೆಪಾಟಲಿಗೀಡಾಗಿದ್ದು ಎಲ್ಲರಿಗೂ ನೆನಪಿದೆ. ಆದರೆ ಈಗ ಅದೇ ಸಾಲಿಗೆ ಹೊಸ ಸೇರ್ಪಡೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ.

ಅನುಷ್ಕಾ ಶರ್ಮಾಳ ಪೆದ್ದುತನವೀಗ ಸೋಷ್ಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದೆ. ಅದೇನಪ್ಪಾ ಅಂದ್ರೆ ಮಾಜಿ ರಾಷ್ಟ್ರಪತಿ  ಅಬ್ದುಲ್ ಕಲಾಂ ನಿಧನಕ್ಕೆ ಕಂಬನಿ ಮಿಡಿದು ಅನುಷ್ಕಾ ಶರ್ಮಾ ಟ್ವಿಟರ್‌ನಲ್ಲಿ ಶ್ರದ್ಧಾಂಜಲಿ ಟ್ವೀಟ್ ಮಾಡಿದ್ದಾಳೆ. ಹೀಗೆ ಶ್ರದ್ದಾಂಜಲಿ ಟ್ವೀಟ್ ಟೈಪ್ ಮಾಡಿದಾಗ ಅದರಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಎಬಿಜೆ ಕಲಾಂ ಆಜಾದ್ ಎಂದು ಟೈಪ್ ಮಾಡಿದ್ದಾಳೆ.

ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಎಬಿಜೆ ಕಲಾಂ ಅಜಾದ್ ಎಂದು ಟೈಪಿಸಿ ಶ್ರದ್ಧಾಂಜಲಿ ಅರ್ಪಿಸಿರುವ ಅನುಷ್ಕಾ ಟ್ವೀಟ್‌ಗೆ ನೆಟಿಜನ್‌ಗಳಿಂದ ಯದ್ವಾತದ್ವ ಟೀಕಾಪ್ರಹಾರಗಳು ನಡೆದವು. ಅಷ್ಟರಲ್ಲಿ ಅನುಷ್ಕಾ ತನ್ನ ಟ್ವೀಟ್‌ನ್ನು ಡಿಲೀಟ್ ಮಾಡಿ ಇನ್ನೊಂದು ಟ್ವೀಟ್ ಪೋಸ್ಟ್ ಮಾಡಿದಳು.

Story image



ಅದರಲ್ಲಿ ಎಬಿಜೆ ಇದ್ದದ್ದು ಎಪಿಜೆ ಆಗಿದ್ದರೂ ಕಲಾಂ ಹೆಸರನ್ನು ಮತ್ತೆ ಎಪಿಜೆ ಕಲಾಂ ಆಜಾದ್ ಎಂದು ಬರೆಯಲಾಗಿತ್ತು. ಮತ್ತೆ ಟ್ವಿಟರ್ ನಲ್ಲಿ ಟೀಕಾ ಪ್ರಹಾರವಾದಾಗ ಮೂರನೇ ಬಾರಿ ಅನುಷ್ಕಾ ಎಪಿಜೆ ಅಬ್ದುಲ್ ಕಲಾಂ ಎಂದು ಸರಿಯಾಗಿ ಬರೆದು ಟ್ವೀಟ್ ಮಾಡಿದಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.