ಯಾಕೂಬ್ ಪರ ಟ್ವೀಟ್: ಟ್ವೀಟ್ ವಾಪಸ್ ಪಡೆದ ಸಲ್ಮಾನ್ ಖಾನ್
ಮುಂಬೈ ಸರಣಿ ಸ್ಫೋಟದ ರೂವಾರಿ ಯಾಕೂಬ್ ಮೆನನ್ ಮರಣದಂಡನೆಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಟ್ವೀಟ್ ಗೆ ದೇಶಾದ್ಯಂತ ತೀವ್ರ...

ಮುಂಬೈ: ಮುಂಬೈ ಸರಣಿ ಸ್ಫೋಟದ ರೂವಾರಿ ಯಾಕೂಬ್ ಮೆನನ್ ಮರಣದಂಡನೆಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಟ್ವೀಟ್ ಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ತಮ್ಮ ಟ್ವೀಟ್ ನ್ನು ಹಿಂಪಡೆದಿರುವುದಾಗಿ ಸಲ್ಲು ಹೇಳಿದ್ದಾರೆ.
ನಾನು ಯಾವುದೇ ಒಂದು ಧರ್ಮಕ್ಕೆ ಬದ್ಧನಾದವನಲ್ಲ. ನಾನು ದೇಶದ ಎಲ್ಲಾ ಧರ್ಮದ ಜನರನ್ನು ಗೌರವಿಸುತ್ತೇನೆ. ಕಾನೂನಿನಲ್ಲಿ ಸಂಪೂರ್ಣ ನಂಬಿಕೆ ಇದೆ. ನಾನು ಟ್ವೀಟ್ ಮಾಡಿರುವುದು ತಪ್ಪಾಗಿದೆ. ನನ್ನ ತಂದೆಯ ಸಲಹೆಯಂತೆ ನನ್ನ ಟ್ವೀಟ್ ಹಿಂಪಡೆದುಕೊಳ್ಳುತ್ತಾ ದೇಶದ ಜನರಲ್ಲಿ ಬೇಷರತ್ ಕ್ಷಮೆ ಯಾಚಿಸುತ್ತೇನೆ' ಎಂದು ಮರು ಟ್ವೀಟ್ ಮಾಡಿದ್ದಾರೆ.
ಸಲ್ಮಾನ್ ಖಾನ್ ಮುಂಬೈ ನಿವಾಸದ ಎದುರು ಇಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾ ನಿರತರನ್ನು ತಡೆಯಲು ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.
ನಾಗ್ಪುರ ಸೆಂಟ್ರಲ್ ಜೈಲಿನಲ್ಲಿ ಯಾಕೂಬ್ ಮೆಮನ್‌ನ ಕೊರಳಿಗೆ ಕುಣಿಕೆ ಬಿಗಿಯಲು ಪೂರ್ವ ತಯಾರಿಗಳು ಭರದಿಂದ ನಡೆಯುತ್ತಿವೆ. ಜೈಲಿನ ಅಧಿಕಾರಿಗಳು ಯಾಕೂಬ್‌ನನ್ನು ಗಲ್ಲಿಗೇರಿಸುವ ಸಂಬಂಧ ರಿಹರ್ಸಲ್‌ಗಳನ್ನು ಮತ್ತು ಸತತ ಸಭೆಗಳನ್ನು ನಡೆಸತೊಡಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


