ದೇಶ

ಐಸಿಸ್ ಬಳಿ ಚಿಕನ್ ಬಾಂಬ್

ಉಗ್ರ ಚಟುವಟಿಕೆಗಳಲ್ಲಿ ಹೊಸ ಹೊಸ ವಿನಾಶಕ ಆವಿಷ್ಕಾರಗಳನ್ನು ನಡೆಸುತ್ತಿರುವ ಐಸಿಸ್ ಉಗ್ರರು ಇದೀಗ ಚಿಕನ್ ಬಾಂಬ್‍ಗಳನ್ನು ಕಂಡು ಹಿಡಿದಿದ್ದಾರೆ...

ಐಸಿಸ್ ಬಳಿ ಚಿಕನ್ ಬಾಂಬ್
ಐಸಿಸ್ ಬಳಿ ಚಿಕನ್ ಬಾಂಬ್
Published On :

ಲಂಡನ್: ಉಗ್ರ ಚಟುವಟಿಕೆಗಳಲ್ಲಿ ಹೊಸ ಹೊಸ ವಿನಾಶಕ ಆವಿಷ್ಕಾರಗಳನ್ನು ನಡೆಸುತ್ತಿರುವ ಐಸಿಸ್ ಉಗ್ರರು ಇದೀಗ ಚಿಕನ್ ಬಾಂಬ್‍ಗಳನ್ನು ಕಂಡು ಹಿಡಿದಿದ್ದಾರೆ.

ಐಸಿಸ್ ಉಗ್ರರ ಬೆಂಬಲಿಗರು ಹಾಗೂ ವಿರೋಧಿಗಳು ಈ ಹೊಸ ಆವಿಷ್ಕಾರದ ಫೋಟೋಗಳನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಹಾಗೂ ಅಧಿಕೃತ ವೆಬ್ ಸೈಟ್‍ಗಳಲ್ಲಿ ಪ್ರಕಟಿಸಿದ್ದಾರಾದರೂ, ಅದರ ಸತ್ಯಾಸತ್ಯತೆ ಇನ್ನೂ ಬಹಿರಂಗವಾಗಿಲ್ಲ. ಈ ಚಿಕನ್‍ಬಾಂಬ್‍ಗಳನ್ನು ``ಸೂಸೈಡ್ ಚಿಕನ್'' ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದು, ಕೋಳಿಗಳಿಗೆ ಬೆಲ್ಟ್ ಕಟ್ಟಿ ಬಾಂಬ್ ಸಿಕ್ಕಿಸಿ ಅವುಗಳನ್ನು ಶತ್ರುಪಾಳಯದೊಳಕ್ಕೆ ಹಾರಿಬಿಡುವುದು ಉಗ್ರರ ತಂತ್ರ ಎಂದು ``ಡೈಲಿ ಮೇಲ್'' ವರದಿ ಮಾಡಿದೆ.

ಕೋಳಿಗಳು ಶತ್ರುಗಳ ಸಮೀಪಕ್ಕೆ ಹೋಗುವವರೆಗೂ ಗೊತ್ತಾಗುವುದಿಲ್ಲ. ಶತ್ರುಗಳ ಸಮೀಪಕ್ಕೆ ತೆರಳುತ್ತಿದ್ದಂತೆ ರಿಮೋಟ್ ಕಂಟ್ರೋಲ್ ಸಹಾಯದಿಂದ ಸ್ಪೋಟಿಸುವುದು ಅವರ ಯೋಜನೆ. ``ವಿನಾಶ ಮತ್ತು ಹತ್ಯೆ ನಡೆಸಲು ಐಸಿಸ್ ಏನನ್ನೂ ಮಾಡಲು ಸಿದ್ಧವಿದೆ. ಯುದ್ಧದಲ್ಲಿ ಪಕ್ಷಿಗಳ ಬಳಕೆ ಮಿಲಿಟರಿ ನಿಯಮಕ್ಕೆ ವಿರುದ್ಧ. ಆದರೆ ಐಸಿಸ್ ಕುತಂತ್ರದ ಮೂಲಕವಾದರೂ ಜನರನ್ನು ಕೊಲ್ಲಲು ಬಯಸುತ್ತದೆ'' ಎಂದು ಹೆಸರು ಬಹಿರಂಗಗೊಳಿಸದ ಬ್ರಿಟಿಷ್ ಸೈನಿಕನೊಬ್ಬ ಚಿಕನ್ ಬಾಂಬ್ ಆವಿಷ್ಕಾರದ ವಿರುದ್ಧಪ್ರತಿಕ್ರಿಯಿಸಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.