ದೇಶ

ದೇಣಿಗೆ ಕೇಳಿ ಒಂದೇ ದಿನದಲ್ಲಿ 6.50 ಲಕ್ಷ ಸಂಗ್ರಹಿಸಿದ ಕೇಜ್ರಿವಾಲ್

ಆಮ್ ಆದ್ಮಿ ಪಕ್ಷ ದಿವಾಳಿ ಅಂಚಿನಲ್ಲಿದ್ದು, ಸಾರ್ವಜನಿಕರು ಪಕ್ಷಕ್ಕೆ ದೇಣಿಗೆ ನೀಡಿ ಕಾಪಾಡಬೇಕೆಂದು ಹೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನವಿ 500 ಕ್ಕೂ ಹೆಚ್ಚು ದಾನದಾತರ ಹೃದಯ ಮುಟ್ಟಿದ್ದು...

ದೇಣಿಗೆ ಕೇಳಿ ಒಂದೇ ದಿನದಲ್ಲಿ 6.50 ಲಕ್ಷ ಸಂಗ್ರಹಿಸಿದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Published On :

ನವದೆಹಲಿ: ಆಮ್ ಆದ್ಮಿ ಪಕ್ಷ ದಿವಾಳಿ ಅಂಚಿನಲ್ಲಿದ್ದು, ಸಾರ್ವಜನಿಕರು ಪಕ್ಷಕ್ಕೆ ದೇಣಿಗೆ ನೀಡಿ ಕಾಪಾಡಬೇಕೆಂದು ಹೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನವಿ 500 ಕ್ಕೂ ಹೆಚ್ಚು ದಾನದಾತರ ಹೃದಯ ಮುಟ್ಟಿದ್ದು, ಒಂದೇ ದಿನದಲ್ಲೇ ರು.6,75,789 ಲಕ್ಷ ಹಣ ಸಂಗ್ರಹವಾಗಿರುವುದಾಗಿ ತಿಳಿದುಬಂದಿದೆ.

ಎಎಪಿ ಪಕ್ಷದ ಪ್ರಚಾರಕ್ಕಾಗಿ ಈಗಾಗಲೇ ಸರ್ಕಾರದಿಂದ ಸುಮಾರು 250 ಕೋಟಿ ಹಣ ಖರ್ಚು ಮಾಡಿ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಿನ್ನೆಯಷ್ಟೇ ಆಪ್ ಪಕ್ಷ ದಿವಾಳಿ ಅಂಚಿನಲ್ಲಿದ್ದು, ಸಾರ್ವಜನಿಕರು ದೇಣಿಗೆ ನೀಡಿ ಪಕ್ಷವನ್ನು ಮುಂದುವರೆಯುವಂತೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದರು.

ದೆಹಲಿಯಲ್ಲಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಸಾರ್ವಜನಿಕರೇ ಪಕ್ಷಕ್ಕೆ ಹಣ ನೀಡಿ ಸಹಾಯ ಮಾಡಿದ್ದರು. ಇದೀಗ ನಮ್ಮ ಪಕ್ಷಕ್ಕೆ ಹಣದ ಕೊರತೆ ಯುಂಟಾಗಿದೆ. ಹಣ ಬೇಕಿದ್ದರೆ ಕೆಟ್ಟ ದಾರಿಯಿಂದ ಬೇಕಾದರೂ ನಾವು ಪಡೆಯಬಹುದು, ಆದರೆ ನಾವು ಅಂತಹ ಹಣದಿಂದ ಎಂದಿಗೂ ಮೇಲೆ ಬರಲಿಲ್ಲ. ಪಕ್ಷ ನಿಂತಿರುವುದು ದೇಣಿಗೆ ಹಣ ಸಂಗ್ರಹದಿಂದ. ಹೀಗಾಗಿ ಪಕ್ಷದ ಮುಂದುವರೆಯಲು ಸಾರ್ವಜನಿಕರು ಹಣ ನೀಡುಬೇಕೆಂದು ಕೇಜ್ರಿವಾಲ್ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.