ಕಲ್ಲಿದ್ದಲು ಹಗರಣ: ಮಧುಕೊಡಾ ಸೇರಿ 9 ಜನರ ವಿರುದ್ಧ ದೋಷಾರೋಪಣೆ ಸಲ್ಲಿಸಲು ಕೋರ್ಟ್ ಆದೇಶ
ಕಲ್ಲಿದ್ದಲು ಹಂಚಿಕೆ ಹಗರಣದ ಸಂಬಂಧ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡಾ, ಸೇರಿದಂತೆ ಒಟ್ಟು 9 ಜನರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಸಿಬಿಐ ವಿಶೇಷ ನ್ಯಾಯಲಾಯ ಆದೇಶ ನೀಡಿದೆ.

ನವದೆಹಲಿ: ಕಲ್ಲಿದ್ದಲು ಹಂಚಿಕೆ ಹಗರಣದ ಸಂಬಂಧ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡಾ, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಹೆಚ್.ಸಿ ಗುಪ್ತಾ, ಜಾರ್ಖಂಡ್ ನ ಮಾಜಿ ಮುಖ್ಯ ಕಾರ್ಯದರ್ಶಿ ಅಶೋಕ್ ಕುಮಾರ್ ಬಸು ಸೇರಿದಂತೆ ಒಟ್ಟು 9 ಜನರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಸರ್ಕಾರಿ ನೌಕರರಾದ ಬಸಂತ್ ಕುಮಾರ್ ಭಟ್ಟಾಚಾರ್ಯ ಹಾಗೂ ಬಿಪಿನ್ ಬಿಹಾರಿ ಸಿಂಗ್, ವಿನಿ ಕಬ್ಬಿಣ ಮತ್ತು ಉಕ್ಕು ಉದ್ಯೋಗ್ ಲಿಮಿಟೆಡ್(ವಿ.ಐ.ಎಸ್.ಯು.ಎಲ್) ನ ನಿರ್ದೇಶಕ ವೈಭವ್ ತುಲ್ಸ್ಯಾನ್, ಮಧುಕೋಡಾ ಅವರ ಆಪ್ತ ವಿಜಯ್ ಜೋಷಿ ಹಾಗೂ ಲೆಕ್ಕಪರಿಶೋಧಕರ ನವೀನ್ ಕುಮಾರ್ ವಿರುದ್ಧ ಕ್ರಿಮಿನಲ್ ಸಂಚು, ಮೋಸ ಆರೋಪದಡಿ ದೋಷಾರೋಪಣೆ ಪಟ್ಟಿ ಸಲ್ಲಿಸಬೇಕೆಂದು ಕೋರ್ಟ್ ನ ನ್ಯಾ. ಭರತ್ ಪರಾಶರ್ ಸಿಬಿಐ ಪೊಲೀಸರಿಗೆ ಆದೇಶ ನೀಡಿದ್ದಾರೆ.
ಹಗರಣಕ್ಕೆ ಸಂಬಂಧಿಸಿದ ಒಟ್ಟು 9 ಆರೋಪಿಗಳ ವಿರುದ್ಧ ಭ್ರಷ್ಟಾಚ ತಡೆ ಕಾಯ್ದೆಯ ಐಪಿಸಿ ಸೆಕ್ಷನ್ 120 ಬಿ ( ಕ್ರಿಮಿನಲ್ ಸಂಚು) 420 (ಮೋಸ) ಪ್ರಕಾರ ದೋಷಾರೋಪಣೆ ಸಲ್ಲಿಸುವಂತೆ ಆದೇಶಿಸಿ ಮುಂದಿನ ವಿಚಾರಣೆಯನ್ನು ಜುಲೈ.31 ಕ್ಕೆ ಮುಂದೂಡಿದ್ದಾರೆ.
ಕಲ್ಲಿದ್ದಲು ಹಂಚಿಕೆಯಲ್ಲಿ ಮಧು ಕೊಡ ಹಾಗೂ ಜಾರ್ಖಂಡ್ ನ ಮಾಜಿ ಮುಖ್ಯ ಕಾರ್ಯದರ್ಶಿ ಅಶೋಕ್ ಬಸು ವಿನಿ ಕಬ್ಬಿಣ ಮತ್ತು ಉಕ್ಕು ಉದ್ಯೋಗ್ ಸಂಸ್ಥೆಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಸಂಚು ರೂಪಿಸಿದ್ದರು ಎಂದು ಸಿಬಿಐ ಈ ಹಿಂದೆ ಕೋರ್ಟ್ ಗೆ ಹೇಳಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


