ಶೇ.2 ಭಾರತೀಯರಷ್ಟೇ ಮಧ್ಯಮ ವರ್ಗದವರು
ಭಾರತದಲ್ಲಿ ಹೆಚ್ಚಿನವರು ತಾವು ಮಧ್ಯಮ ವರ್ಗದವರು ಎಂದೇ ಹೇಳಿಕೊಳ್ಳುತ್ತಾರೆ. ಆದರೆ, ನಿಜಕ್ಕೂ ನಮ್ಮ ದೇಶದಲ್ಲಿರುವ ಮಧ್ಯಮ ವರ್ಗದವರೆಷ್ಟು...

ನವದೆಹಲಿ: ಭಾರತದಲ್ಲಿ ಹೆಚ್ಚಿನವರು ತಾವು ಮಧ್ಯಮ ವರ್ಗದವರು ಎಂದೇ ಹೇಳಿಕೊಳ್ಳುತ್ತಾರೆ. ಆದರೆ, ನಿಜಕ್ಕೂ ನಮ್ಮ ದೇಶದಲ್ಲಿರುವ ಮಧ್ಯಮ ವರ್ಗದವರೆಷ್ಟು ಗೊತ್ತಾ? ಕೇವಲ ಶೇ.2ರಷ್ಟು ಮಂದಿ. ಹೀಗೆಂದು ಪ್ಯೂ ಸಂಶೋಧನಾ ಕೇಂದ್ರದ ಸಮೀಕ್ಷೆಯು ತಿಳಿಸಿದೆ.
ವರದಿಯ ಪ್ರಕಾರ, ಎಲ್ಲರೂ ಅಂದುಕೊಂಡಂತೆ ಭಾರತದಲ್ಲಿರುವ ಹೆಚ್ಚಿನವರು ಮಧ್ಯಮ ವರ್ಗದವರಲ್ಲ. ಹೆಚ್ಚಿನ ಭಾರತೀಯರು ಬಡವರು. ವಿಶ್ವ ಜನಸಂಖ್ಯೆಯಾದ್ಯಂತ ಆದಾಯ ಮಟ್ಟದಲ್ಲಾಗುತ್ತಿರುವ ಬದಲಾವಣೆ ಬಗ್ಗೆಯೂ ಅಧ್ಯಯನ ಮಾಡಿರುವ ಸಂಸ್ಥೆ, 2000ನೇ ಇಸವಿಯ ಆರಂಭದಲ್ಲಿ ಜಾಗತಿಕ ಬಡತನದಲ್ಲಿ ಇಳಿಮುಖವಾಗಿತ್ತು. ಹೀಗಿದ್ದಾಗ್ಯೂ, ವಿಶ್ವದ ಮಧ್ಯಮ ವರ್ಗದವರ ಪ್ರಮಾಣ ಶೇ.15ಕ್ಕಿಂತ ಕಡಿಮೆಯೇ ಇತ್ತು ಎಂದು ತಿಳಿಸಿದೆ.
ಭಾರತದಲ್ಲಿ ಶೇ.95ರಷ್ಟು ಮಂದಿ ಕಡಿಮೆ ಆದಾಯ ಹೊಂದಿರುವವರು ಅಂದರೆ ಬಡವರು. ಶೇ.2ರಷ್ಟು ಮಂದಿ ಮಾತ್ರ ಮಧ್ಯಮ ವರ್ಗದವರು. ಇದೇ ವೇಳೆ, 2001ರಲ್ಲಿ ಶೇ.35ರಷ್ಟಿದ್ದ ದೇಶದ ಬಡತನದ ದರ 2011ರ ವೇಳೆಗೆ ಶೇ.20ಕ್ಕಿಳಿದಿದೆ. ಅದೇ ರೀತಿ, ಮಧ್ಯಮ ಆದಾಯ ಹೊಂದಿರುವವರ ಸಂಖ್ಯೆ ಶೇ.1ರಿಂದ ಶೇ.3ಕ್ಕೇರಿದೆ ಎಂದೂ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


