ಯೋಧರಿಂದ ಉಗ್ರಗಾಮಿಗಳ ಹತ್ಯೆ: ಅಡಗುದಾಣ ನಾಶ
ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿರುವ ಕೆರಾನ್ ವಲಯದಲ್ಲಿ ಗಡಿ ಭಾಗದಲ್ಲಿ ಭಾರತದೊಳಗೆ ನುಸುಳಲು ಯತ್ಮಿಸುತ್ತಿದ್ದ ಮೂವರು ಉಗ್ರರನ್ನು ಗಡಿ ಭದ್ರತಾ ಯೋಧರು ಕೊಂದುಹಾಕಿ ಅವರ ಅಡಗುದಾಣಗಳನ್ನು ನಾಶಪಡಿಸಿದ್ದಾರೆ...

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿರುವ ಕೆರಾನ್ ವಲಯದಲ್ಲಿ ಗಡಿ ಭಾಗದಲ್ಲಿ ಭಾರತದೊಳಗೆ ನುಸುಳಲು ಯತ್ಮಿಸುತ್ತಿದ್ದ ಮೂವರು ಉಗ್ರರನ್ನು ಗಡಿ ಭದ್ರತಾ ಯೋಧರು ಕೊಂದುಹಾಕಿ ಅವರ ಅಡಗುದಾಣಗಳನ್ನು ನಾಶಪಡಿಸಿದ್ದಾರೆ.
ಕೆರಾನ್ ವಲಯದ ಗಡಿ ರೇಖೆಯ ಬೇಲಿ ಬಳಿ ಕಳೆದ ಮಧ್ಯರಾತ್ರಿ ಉಗ್ರರು ಒಳನುಸುಳಲು ಯತ್ನಿಸುತ್ತಿದ್ದರು. ಭದ್ರತಾಪಡೆ ಯೋಧರು ಜಾಗೃತರಾದಾಗ ಉಗ್ರಗಾಮಿಗಳು ಸಹ ಬಂದೂಕು ಮೂಲಕ ದಾಳಿ ನಡೆಸಲು ಆರಂಭಿಸಿದರು.
ಗಂಟೆಗಳ ಕಾಲ ದಾಳಿ ಮುಂದುವರಿಯಿತು. ಕೊನೆಗೂ ಯೋಧರು ಸವಾಲನ್ನು ದಿಟ್ಟವಾಗಿ ಎದುರಿಸಿ ಮೂರು ಮಂದಿ ಉಗ್ರಗಾಮಿಗಳನ್ನು ಕೊಂದು ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಮಂಜುಗಡ್ಡೆ ಕರಗಿ ನೀರಾಗುತ್ತಿರುವುದರಿಂದ ಗಡಿ ರೇಖೆಯೊಳಗೆ ನುಸುಳಿ ಬರುವ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗುತ್ತಿದೆ. ಕುಪ್ವಾರ ಜಿಲ್ಲೆಯ ತಂಗ್ದಾರ್ ವಲಯದಲ್ಲಿ ಮೇ 25, ಮೇ 31 ಮತ್ತು ಜೂನ್ 6ರಂದು ಯೋಧರು ಉಗ್ರರ ಅಡಗುದಾಣಗಳನ್ನು ನಾಶಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


