ಒಳ್ಳೆಯ ಹಾಗೂ ಕೆಟ್ಟ ಭಯೋತ್ಪಾದನೆ ಎಂಬುದಿಲ್ಲ: ಆನಂದ್ ಶರ್ಮಾ
ಭಯೋತ್ಪಾದನೆಯಲ್ಲಿ ಒಳ್ಳೆಯದ್ದು ಹಾಗೂ ಕೆಟ್ಟದ್ದು ಎಂಬುದಿಲ್ಲ. ಪ್ರಪಂಚಾದ್ಯಂತ ತಲೆದೋರುತ್ತಿರುವ....

ಯುನೈಟೆಡ್ ನೇಷನ್: ಭಯೋತ್ಪಾದನೆಯಲ್ಲಿ ಒಳ್ಳೆಯದ್ದು ಹಾಗೂ ಕೆಟ್ಟದ್ದು ಎಂಬುದಿಲ್ಲ. ಪ್ರಪಂಚಾದ್ಯಂತ ತಲೆದೋರುತ್ತಿರುವ ಭಯೋತ್ಪಾದನೆ ಪಿಡುಗನ್ನು ಬೇರು ಸಮೇತ ಕಿತ್ತು ಹಾಕಲು ಏಕರೀತಿಯ ನೀತಿ ನಿಯಮ ಅಗತ್ಯ ಎಂದು ಸಂಸದ ಆನಂದ್ ಶರ್ಮಾ ಹೇಳಿದ್ದಾರೆ.
ಭಾರತದಲ್ಲಿರುವ ತಳ ಮಟ್ಟದ ಭಯೋತ್ಪಾದಕರಿಂದ ದೇಶಕ್ಕೆ ಬಂದೆದೊಗುವ ವಿಪತ್ತಿನ ಬಗ್ಗೆ ಆಂತಕ ವ್ಯಕ್ತಪಡಿಸಿದ ಆನಂದ್ ಶರ್ಮಾ ಮಧ್ಯ ಪೂರ್ವ ರಾಷ್ಟ್ರಗಳು ಹಾಗೂ ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ನಿಯಂತ್ರಣಕ್ಕೆ ಕಠಿಣ ಕಾನೂನು ಅಗತ್ಯ ಎಂದು ಹೇಳಿದರು.
ಇಸಿಸ್ ಉಗ್ರ ಸಂಘಟನೆ ನಡೆಸುತ್ತಿರುವ ಬರ್ಬರ ಕೃತ್ಯಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಆನಂದ್ ಶರ್ಮಾ, ಉಗ್ರರು ಯಾವುದೇ ಧರ್ಮ ವನ್ನು ಪ್ರತಿ ನಿಧಿಸುವುದಿಲ್ಲ ಎಂದು ಹೇಳಿದ ಅವರು ಯಾವುದೇ ಧರ್ಮ ಅಪರಾಧ ಮಾಡುವಂತೆ ಎಲ್ಲಿಯೂ ಪ್ರತಿಪಾದಿಸುವುದಿಲ್ಲ ಎಂದರು.
ಅಮೆರಿಕಾದ ಅಂತಾರಾಷ್ಟ್ರೀಯ ಸೋಷಿಯಲಿಸ್ಟ್ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು ತಳಮಟ್ಟದಿಂದ ಬೇರೂರುತ್ತಿರುವ ಭಯೋತ್ಪಾದನೆ ವಿರುದ್ಧ ಹೋರಾಡಲು ಎಲ್ಲರೂ ಒಗ್ಗೂಡಬೇಕು ಎಂದು ಕರೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


