ಹೋರಾಟ

ಬಡವರು ತಮ್ಮ ಹಕ್ಕುಗಳಿಗಾಗಿ ಹೋರಾಡದಿದ್ದರೆ ಹಿಟ್ಲರ್- ಮುಸೊಲಿನಿಯಂತವರು ದೇಶ ಆಳುತ್ತಾರೆ: ಮಲ್ಲಿಕಾರ್ಜುನ ಖರ್ಗೆ
ಇಂತಹ ಮೂರ್ಖ ಸರ್ಕಾರಕ್ಕೆ ಪಾಠ ಕಲಿಸಲು ನಾವು ಬಯಸಿದರೆ,ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲಾ ಬಡ ಜನರು ಒಂದಾಗಬೇಕು, ಜಾತಿ, ಕುಲ ಮತ್ತು ಧರ್ಮವನ್ನು ಬದಿಗಿಟ್ಟು, ತಮ್ಮ ಹಕ್ಕುಗಳಿಗಾಗಿ ಹೋರಾಡುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು.

ಮುಸ್ಲಿಂ ಗುತ್ತಿಗೆದಾರರಿಗೆ ಶೇ.4ರಷ್ಟು ಮೀಸಲಾತಿ ವಿರುದ್ಧ ಬಿಜೆಪಿ ಹೋರಾಟಕ್ಕೆ ಬೆಂಬಲವಿಲ್ಲ: ಜೆಡಿಎಸ್
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿಯನ್ನು ಒದಗಿಸಿದ್ದಾರೆ. ಆದ್ದರಿಂದ, ಈ ಹೋರಾಟದಲ್ಲಿ ನಾವು ಬಿಜೆಪಿಯನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ

ಜಯ ಮೃತ್ಯುಂಜಯ ಸ್ವಾಮೀಜಿ BJP ಏಜೆಂಟ್, ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದ್ರೆ ಕೈ ಕತ್ತರಿಸುತ್ತೇವೆ: ಕೆಎಸ್ ಶಿವರಾಮು ಎಚ್ಚರಿಕೆ
ಬಿಜೆಪಿಯವರು, ಸಿದ್ದರಾಮಯ್ಯ ಅವರ ತಪ್ಪಿಲ್ಲದಿದ್ದರೂ ಮುಡಾ, ವಾಲ್ಮೀಕಿ ನಿಗಮದ ಹಗರಣವನ್ನು ಮುಂದಿಟ್ಟುಕೊಂಡು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಿದರು. ಆದರೆ, ಇದರಿಂದ ಪ್ರಯೋಜನ ಆಗದಿದ್ದಕ್ಕೆ ಸ್ವಾಮೀಜಿಯನ್ನು ಎತ್ತಿ ಕಟ್ಟಿದ್ದಾರೆ.

ಕಲಬುರಗಿ: ವರದಕ್ಷಿಣೆ ಕಿರುಕುಳಕ್ಕೆ ಪುತ್ರಿ ಬಲಿ; ಮಗಳ ಸಾವಿಗೆ ನ್ಯಾಯ ಕೊಡಿಸಲು ತಂದೆ ಏಕಾಂಗಿ ಹೋರಾಟ!
ಸೇಡಂ ಮತ್ತು ಶಂಕರಪಲ್ಲಿ ಗ್ರಾಮದಲ್ಲೂ ಇಂತಹ ಬ್ಯಾನರ್ ಹಾಕಿದ್ದಾರೆ. ಅವರು ನನ್ನ ಮಗಳನ್ನು ಕೊಂದಿದ್ದಾರೆ. ಜಯಲಕ್ಷ್ಮಿ ಸೇಡಂ ತಾಲೂಕಿನ ಶಂಕರಪಲ್ಲಿ ಗ್ರಾಮದ ಸಿದ್ದರೆಡ್ಡಿ ಮತ್ತು ಸಾವಿತ್ರಮ್ಮ ದಂಪತಿಯ ಪುತ್ರ ಶಂಕರ್ ರೆಡ್ಡಿ ಅವರನ್ನು ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು.

ಪ್ರಾದೇಶಿಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು 2004 ರಿಂದ HDK ಕಸರತ್ತು: ಅಂದಿನಿಂದ ಇಂದಿನವರೆಗೂ ಕುಮಾರಸ್ವಾಮಿ ಜೆಡಿಎಸ್ ಪರಿಪಾಲಕ!
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರನ್ನು ಕರ್ನಾಟಕ ರಾಜಕೀಯದ ಚಾಣಕ್ಯ ಎಂದು ಪರಿಗಣಿಸಿದ ರಾಜಕೀಯ ವಿಶ್ಲೇಷಕರು ಈಗ ಅವರ ಪುತ್ರ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರನ್ನು ಜನತಾ ದಳದ (ಸೆಕ್ಯುಲರ್) ಪರಿಪಾಲಕ ಎಂದು ಕರೆದಿದ್ದಾರೆ.

ಕೊನೆಯ ಉಸಿರು ಇರುವವರೆಗೂ ಕಾವೇರಿ ನೀರಿಗಾಗಿ ಹೋರಾಟ: ಹೆಚ್.ಡಿ. ದೇವೇಗೌಡ
ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ಮತ್ತೆ ಪ್ರಧಾನಿಯಾಗಲಿರುವ ನರೇಂದ್ರ ಮೋದಿಯಿಂದ ಮಾತ್ರ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕಾವೇರಿ' ಗಲಾಟೆಗೆ ಕರ್ನಾಟಕ ಬಂದ್: ಬೆಂಗಳೂರು, ರಾಜ್ಯದ ದಕ್ಷಿಣ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ‘ಕನ್ನಡ ಒಕ್ಕೂಟ’ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಇಂದು ಶುಕ್ರವಾರ ಬೆಂಗಳೂರು ಹಾಗೂ ರಾಜ್ಯದ ಇತರ ದಕ್ಷಿಣ ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ರಾಜ್ಯದಲ್ಲಿ ಭುಗಿಲೆದ್ದ ಕಾವೇರಿ ಕಿಚ್ಚು: ಮಂಡ್ಯ, ಮದ್ದೂರಿನಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ; ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹ
ರಾಜ್ಯದಲ್ಲಿ ಕಾವೇರಿ ಹೋರಾಟದ ಕಿಚ್ಚು ಮತ್ತಷ್ಟು ತೀವ್ರಗೊಂಡಿದೆ. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಸದಂತೆ ಒತ್ತಾಯಿಸಿ ರೈತ ಸಂಘಟನೆಗಳು ಶನಿವಾರ ಮಂಡ್ಯ ಹಾಗೂ ಮದ್ದೂರಿನಲ್ಲಿ ಬಂದ್ ನಡೆಸುತ್ತಿದ್ದು, ಬಂದ್'ಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ಯಾವುದೇ ಹೋರಾಟಕ್ಕೂ ಸಿದ್ಧ: ರೈತರ ಹೋರಾಟಕ್ಕೆ ಸ್ಯಾಂಡಲ್ ವುಡ್ ಬೆಂಬಲ
ಕಾವೇರಿ ವಿವಾದದ ಬಗ್ಗೆ ಮೌನ ತಾಳಿದ್ದಕ್ಕಾಗಿ ಟೀಕೆಗಳ ಸುರಿಮಳೆಗಳು ಸುರಿದ ಬೆನ್ನಲ್ಲೇ ರೈತರ ಹೋರಾಟಕ್ಕೆ ಸ್ಯಾಂಡಲ್ ವುಡ್ ಬೆಂಬಲ ವ್ಯಕ್ತಪಡಿಸಿದೆ.

