3 ವಾರಗಳಲ್ಲಿ ಭಾರತಕ್ಕೆ ಬರುವಂತೆ ಲಲಿತ್ ಮೋದಿಗೆ ಜಾರಿ ನಿರ್ದೇಶನಾಲಯ ಸಮನ್ಸ್
3 ವಾರಗಳಲ್ಲಿ ಭಾರತಕ್ಕೆ ವಾಪಸ್ ಬರಬೇಕೆಂದು ಜಾರಿ ನಿರ್ದೇಶನಾಲಯ ಲಂಡನ್ ನಲ್ಲಿ ವಾಸಿಸುತ್ತಿರುವ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ....

ಮುಂಬಯಿ: 3 ವಾರಗಳಲ್ಲಿ ಭಾರತಕ್ಕೆ ವಾಪಸ್ ಬರಬೇಕೆಂದು ಜಾರಿ ನಿರ್ದೇಶನಾಲಯ ಲಂಡನ್ ನಲ್ಲಿ ವಾಸಿಸುತ್ತಿರುವ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಗೆ ಸಮನ್ಸ್ ನೀಡಿದೆ.
ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಪ್ರಸಾರ ಹಕ್ಕು ನೀಡಲು 125 ಕೋಟಿ ಕಿಕ್ ಬ್ಯಾಕ್ ಪಡೆದ ಆರೋಪ ಸಂಬಂಧ ತುರ್ತಾಗಿ ಲಲಿತ್ ಮೋದಿ ವಿಚಾರಣೆ ನಡೆಸಬೇಕಿರುವುದರಿಂದ 3 ವಾರಗಳಲ್ಲಿ ಮುಂಬಯಿಯಲ್ಲಿ ಹಾಜರಿರುವಂತೆ ಜಾರಿ ನಿರ್ದೇಶನಾಲಯ ನೊಟೀಸ್ ನಲ್ಲಿ ಸೂಚಿಸಿದೆ. 2008 ರಲ್ಲಿ ಲಲಿತ್ ಮೋದಿ 125 ಕೋಟಿ ಲಂಚ ಪಡೆದಿದ್ದರೆಂದು ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಮುಂಬಯಿನ ಜಾರಿ ನಿರ್ದೇಶಾನಲಯದಲ್ಲಿ ಕೇಸು ದಾಖಲಿಸಿದ್ದರು.
ಐಪಿಎಲ್ ನಲ್ಲಿ ಹಣದ ಅವ್ಯವಹಾರ ಆರೋಪ ಎದುರಿಸುತ್ತಿದ್ದ ಲಲಿತ್ ಮೋದಿ 2010 ರಿಂದ ಲಂಡನ್ ನಲ್ಲಿ ನೆಲೆಸಿದ್ದಾರೆ. ನಿನ್ನೆ ಸಂಜೆಯ ಜಾರಿ ನಿರ್ದೇಶನಾಲಯ ಲಲಿತ್ ಮೋದಿಗೆ ಸಮನ್ಸ್ ನೀಡಿದೆ. ಇನ್ನು ಲಲಿತ್ ಮೋದಿ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಕೂಡ ಜಾರಿ ಮಾಡಿದೆ.
ಇನ್ನು ಜಾರಿ ನಿರ್ದೇಶನಾಲಯಯದ ಸಮನ್ಸ್ ಬಗ್ಗೆ ಪ್ರತಿಕ್ರಿಯಿಸಿರುವ ಲಲಿತ್ ಮೋದಿ ನನಗೆ ಇದುವರೆಗೂ ಯಾವುದೇ ನೋಟೀಸ್ ಬಂದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಭೂಗತ ಪಾತಕಿಗಳಿಂದ ಜೀವ ಭಯ ಇರುವುದರಿಂದ ಭಾರತಕ್ಕೆ ಬರುವ ವಿಷಯವನ್ನು ಲಲಿತ್ ಮೋದಿ ನಿರಾಕರಿಸಿದ್ದಾರೆ.
ಲಂಡನ್ ನಲ್ಲಿ ಉಳಿದುಕೊಳ್ಳಲು ಕೇಂದ್ರ ಸಚಿವೆ ಸುಷ್ಮ ಸ್ವರಾಜ್ ಮತ್ತು ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ತನಗೆ ಸಹಾಯ ಮಾಡಿದ್ದರೆಂದು ಲಲಿತ್ ಮೋದಿ ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


