ಮನೆಯಲ್ಲಿ ಶೌಚಾಲಯ ಕಟ್ಟಲು ಪೋಷಕರ ನಿರಾಕರಣೆ: ಬಾಲಕಿ ಆತ್ಮಹತ್ಯೆ
ಪೋಷಕರು ಮನೆಯಲ್ಲಿ ಶೌಚಾಲಯ ಕಟ್ಟಿಸಲು ನಿರಾಕರಿಸಿರಿಂದ ಮನನೊಂದ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ...

ಡುಮ್ಕಾ: ಪೋಷಕರು ಮನೆಯಲ್ಲಿ ಶೌಚಾಲಯ ಕಟ್ಟಿಸಲು ನಿರಾಕರಿಸಿರಿಂದ ಮನನೊಂದ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬರ್ಹಿದೆಸೆಗೆ ಹೋಗುವ ಅವಮಾನ ತಾಳಲಾರದೆ ಡುಮ್ಕಾದ ಎಎನ್ ಕಾಲೇಜಿನ ಮೊದಲ ವರ್ಷದ ಬಿಎ ವಿದ್ಯಾರ್ಥಿನಿ ಖುಷ್ಬು ಕುಮಾರಿ ಖುಷ್ಬು ಕುಮಾರಿ ಮನೆಯಲ್ಲಿ ಶೌಚಾಲಯ ಕಟ್ಟಿಸುವಂತೆ ನಾನಾ ರೀತಿಯಲ್ಲಿ ಪೋಷಕರನ್ನು ಕಾಡಿ ಬೇಡಿದ್ದಾಳೆ. ಆದರೆ ಪೋಷಕರು ಈ ಬಗ್ಗೆ ಆಸಕ್ತಿ ತೋರದ್ದರಿಂದ ಟುಮ್ಕಾದ ಗೋಶಾಲಾ ರಸ್ತೆಯಲ್ಲಿರುವ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ.
ಖುಷ್ಟುಳಾ ಮನೆ ನಾಲ್ಕು ಕೊಠಡಿಯಿಂದ ಸುಸಜ್ಜಿತವಾಗಿತ್ತು. ಇದರಿಂದಾಗಿ ಕುಟುಂಬ ಸದಸ್ಯರಿಗೆ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡುವುದು ಅಗತ್ಯ ಎನಿಸಿಲ್ಲ. 'ಮನೆಯಲ್ಲೇ ಶೌಚಾಲಯ ನಿರ್ಮಿಸುವ ಬದಲು ಅದೇ ಹಣವನ್ನು ಆಕೆಯ ಮದುವೆಗೆ ಖರ್ಚು ಮಾಡಲು ಉಳಿತಾಯ ಮಾಡುತ್ತಿದ್ದೆ,'ಎಂದು ಆಕೆಯ ತಂದೆ ತ್ರಿಪಾಠಿ ಯಾದವ್ ಹೇಳಿದ್ದಾರೆ.
'ಮನೆಯಲ್ಲೇ ಶೌಚಾಲಯ ನಿರ್ಮಾಣ ಮಾಡಲು ಖುಷ್ಬು ಒತ್ತಾಯಿಸಿದ್ದಳು. ಆದರೆ, ನಾಲ್ಕು ಗೋಡೆ ನಿರ್ಮಿಸುವುದಾಗಿ ಹೇಳಿದ್ದೆವು. ಇದೇ ವಿಚಾರವಾಗಿ ವಾಗ್ವಾದ ನಡೆದಿತ್ತು, ಬಹಿರ್ದೆಸೆಗಾಗಿ ಆಗಾಗ ತಾತನ ಮನೆಗೆ ಹೋಗುತ್ತಿದ್ದಳು,' ಎಂದು ಖುಷ್ಬು ತಾಯಿ ಸಂಜು ದೇವಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


