ನಮ್ಮ ಕುಟುಂಬದ ಯಾರು ಲಲಿತ್ ಮೋದಿ ಆತಿಥ್ಯ ಸ್ವೀಕರಿಸಿಲ್ಲ: ರಾಹುಲ್
ಗಾಂಧಿ ಕುಟುಂಬದ ಯಾವೊಬ್ಬ ಸದಸ್ಯರೂ ಐಪಿಎಲ್ ಕಳ್ಳಾಟದ ರೂವಾರಿ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿಯ ಆತಿಥ್ಯ ಸ್ವೀಕರಿಸಿಲ್ಲ...

ನವದೆಹಲಿ: ಗಾಂಧಿ ಕುಟುಂಬದ ಯಾವೊಬ್ಬ ಸದಸ್ಯರೂ ಐಪಿಎಲ್ ಕಳ್ಳಾಟದ ರೂವಾರಿ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿಯ ಆತಿಥ್ಯ ಸ್ವೀಕರಿಸಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಲಲಿತ್ ಮೋದಿಯ ಈ ಹೇಳಿಕೆ ಆಧಾರರಹಿತವಾಗಿದೆ. ನಾನಾಗಲಿ, ನನ್ನ ಭಾವ ರಾಬರ್ಟ್ ವಾದ್ರಾ ಅಥವಾ ಸೋದರಿ ಪ್ರಿಯಾಂಕ ಗಾಂಧಿಯಾಗಲಿ ಯಾರೂ ಅವರ ಬಳಿ ಆತಿಥ್ಯ ಪಡೆದಿಲ್ಲ ಎಂದು ರಾಹುಲ್ ಗಾಂಧಿ ಲಲಿತ್ ಮೋದಿಗೆ ತಿರುಗೇಟು ನೀಡಿದ್ದಾರೆ.
ಮೋದಿಯ ಈ ಆರೋಪ ಹಸೀ ಸುಳ್ಳು ಎಂದು ರಾಹುಲ್ ಹೇಳಿದ್ದಾರೆ. ಹೋಟೆಲ್ ಒಂದರಲ್ಲಿ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕ ಹಾಗೂ ಪತಿ ರಾಬರ್ಟ್ ವಾದ್ರಾನ ಅತಿಥಿಗಳಾಗಿದ್ದರು ಎಂದು ಬ್ರಿಟನ್ ವೀಸಾ ವಿವಾದದ ಆರೋಪಿ ಲಲಿತ್ ಮೋದಿ ತನ್ನ ಸರಣಿ ಟ್ವೀಟ್‌ನಲ್ಲಿ ತಿಳಿಸಿದ್ದು, ಆದರೆ ಅದನ್ನು ಕಾಂಗ್ರೆಸ್ ಸಾರಾಸಗಟಾಗಿ ತಳ್ಳಿಹಾಕಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


