10 ತಿಂಗಳಲ್ಲೇ 5 ಬಾರಿ ಗರ್ಭವತಿಯಾದ 60ರ ಮುದುಕಿ?
ಬಡವರಿಗೆ ಹಾಗೂ ಅಸಹಾಯಕರಿಗೆ ಸರ್ಕಾರ ಕೆಲವೊಂದು ಪ್ರಯೋಜನಕಾರಿ ಯೋಜನೆಗಳನ್ನು ರೂಪಿಸಿದೆ ಆದರೆ ಸರ್ಕಾರಿ ಯೋಜನೆಗಳು ಯಾವ ರೀತಿ...

Published On :
ಬರೇಲಿ: ಬಡವರಿಗೆ ಹಾಗೂ ಅಸಹಾಯಕರಿಗೆ ಸರ್ಕಾರ ಕೆಲವೊಂದು ಪ್ರಯೋಜನಕಾರಿ ಯೋಜನೆಗಳನ್ನು ರೂಪಿಸಿದೆ ಆದರೆ ಸರ್ಕಾರಿ ಯೋಜನೆಗಳು ಯಾವ ರೀತಿ ದುರಪಯೋಗವಾಗುತ್ತದೆ ಎಂಬುದಕ್ಕೆ ಜನನಿ ಸುರಕ್ಷಾ ಯೋಜನೆ ಸಾಕ್ಷಿಯಾಗಿದೆ.
ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿರುವ ಜನನಿ ಸುರಕ್ಷಾ ಯೋಜನೆಯ ಪ್ರಯೋಜ ಪದೆಡುಕೊಳ್ಳಲು ಮಹಿಳೆಯೊಬ್ಬಳನ್ನು ನಾಲ್ಕು ತಿಂಗಳಲ್ಲಿ ಮೂರು ಬಾರಿ ಗರ್ಭಿಣಿಯಾಗಿದ್ದಾಳೆಂದು ಅಧಿಕಾರಿಗಳು ಸರ್ಟಿಫಿಕೇಟ್ ನೀಡಿದ್ದಾರೆ. ಮತ್ತೊಂದು ಸೋಜಿಗದ ವಿಷಯವೆಂದರೆ ಮುಟ್ಟು ನಿಂತ 60ರ ಪ್ರಾಯದ ವೃದ್ಧೆಯೊಬ್ಬಳು 10 ತಿಂಗಳಲ್ಲಿ 5 ಬಾರಿ ಗರ್ಭಿಣಿಯಾಗಿದ್ದಾರೆ ಎಂದು ಅಧಿಕಾರಿಗಳು ಪ್ರಮಾಣ ಪತ್ರ ನೀಡಿದ್ದಾರೆ.
ಈ ಎರಡೂ ಪ್ರಕರಣಗಳಲ್ಲಿ ಸರ್ಕಾರಿ ಅಧಿಕಾರಿಗಳು ಈ ಜನನಿ ಸುರಕ್ಷಾ ಯೋಜನೆಯಡಿ ಬರುವ ಹಣವನ್ನು ಲಪಟಾಯಿಸಲು ಇಂಥ ಕೆಲಸ ಮಾಡಿದ್ದಾರೆ. ಗ್ರಾಮೀಣ ಮಹಿಳೆಯರ ಹೆಸರಿನಲ್ಲಿ ಇಂಥ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಯೋಜನೆಯ ಹಣವನ್ನು ಕಸಿದುಕೊಳ್ಳುತ್ತಾರೆ. ಆ ಮಹಿಳೆಗೆ ನಾಮಕಾವಸ್ತೆಗೆ ಒಂದಷ್ಟು ಹಣ ಕೊಟ್ಟು ಕಳಿಸುತ್ತಾರೆ.
ಬಡ ಗರ್ಭಿಣಿಯರು ಸುರಕ್ಷಿತವಾಗಿ ಪ್ರಸವವಾಗುವಂತೆ ಸಹಾಯ ಒದಗಿಸುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿರುವ ಜನನಿ ಸುರಕ್ಷಾ ಯೋಜನೆಯು ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಮಗುವಿನ ತಾಯಿಗೆ 1,400 ರುಪಾಯಿ ಹಾಗೂ ಪೋಷಕಾಂಶಯುಕ್ತ ಆಹಾರವನ್ನು ನೀಡಲಾಗುತ್ತದೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಈ 1,400 ರೂಪಾಯಿ ಲಪಟಾಯಿಸಲು ಸುಳ್ಳು ಗರ್ಭಿಣಿಯರ ದಾಖಲೆಗಳನ್ನು ಸೃಷ್ಟಿಸುತ್ತಾರೆ. ಉತ್ತರ ಪ್ರದೇಶದಲ್ಲಿ ಈಗಾಗಲೇ 200ಕ್ಕೂ ಹೆಚ್ಚು ಇಂಥ ವಂಚನೆಯ ಪ್ರಕರಣಗಳು ಬೆಳಕಿಗೆ ಬಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


