ದೇಶ

ಗೋಹತ್ಯೆ ಮಾಡುವುದು ಹಿಂದೂ ಹೆಣ್ಮಕ್ಕಳನ್ನು ಅತ್ಯಾಚಾರವೆಸಗುವುದಕ್ಕೆ ಸಮ

ಗೋವುಗಳನ್ನು ಹತ್ಯೆ ಮಾಡುವುದು ಅಥವಾ ಅವುಗಳನ್ನು ಕಳ್ಳ ಸಾಗಾಣಿಕೆ ಮಾಡುವುದು ಹಿಂದೂ ಹೆಣ್ಣನ್ನು ಅತ್ಯಾಚಾರ ಮಾಡುವುದಕ್ಕೆ ಮತ್ತು ದೇಗುಲವನ್ನು...

ಗೋಹತ್ಯೆ ಮಾಡುವುದು ಹಿಂದೂ ಹೆಣ್ಮಕ್ಕಳನ್ನು ಅತ್ಯಾಚಾರವೆಸಗುವುದಕ್ಕೆ ಸಮ
ಗೋವುಗಳ ಕಳ್ಳ ಸಾಗಾಣಿಕೆ ( ಸಂಗ್ರಹ ಚಿತ್ರ)
Published On :

ನವದೆಹಲಿ: ಗೋವುಗಳನ್ನು ಹತ್ಯೆ ಮಾಡುವುದು ಅಥವಾ ಅವುಗಳನ್ನು ಕಳ್ಳ ಸಾಗಾಣಿಕೆ ಮಾಡುವುದು ಹಿಂದೂ ಹೆಣ್ಣನ್ನು ಅತ್ಯಾಚಾರ ಮಾಡುವುದಕ್ಕೆ ಮತ್ತು ದೇಗುಲವನ್ನು ಕೆಡವುದಕ್ಕೆ ಸಮ ಎಂದು ಪಶ್ಚಿಮ ಬಂಗಾಳದ ಆರೆಸ್ಸೆಸ್ಸ್ ವಕ್ತಾರ ಜಿಷ್ಣು ಬಸು ಹೇಳಿದ್ದಾರೆ.

ಭಾರತದಿಂದ ಬಾಂಗ್ಲಾದೇಶಕ್ಕೆ ಗೋವುಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿ ಭಾಷಣ ಮಾಡುತ್ತಿದ್ದ ವೇಳೆ ಬಸು ಈ ಮಾತನ್ನಾಡಿದ್ದಾರೆ.

ಭಾರತದಿಂದ ಸಾವಿರಗಟ್ಟಲೆ ಗೋವುಗಳನ್ನು ಬಾಂಗ್ಲಾದೇಶಕ್ಕೆ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಸುದ್ದಿ ತಿಳಿದುಬಂದ ನಂತರ ಗಡಿಪ್ರದೇಶದಲ್ಲಿ ಹೆಚ್ಚಿನ ಸುರಕ್ಷಾಪಡೆಯನ್ನು ಕೇಂದ್ರ ಸರ್ಕಾರ ನಿಯೋಜಿಸಿದೆ.

ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಬಿಎಸ್‌ಎಫ್ ಇಲ್ಲಿಯವರೆಗೆ  ಕಳ್ಳ ಸಾಗಾಣಿಕೆಯಾಗುತ್ತಿದ್ದ 90,000 ಗೋವುಗಳನ್ನು ರಕ್ಷಿಸಿದ್ದು, ಇದಕ್ಕೆ ಸಂಬಂಧಿಸಿದಂತೆ 400 ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.