ಯೋಗದಲ್ಲಿ ವಿಶ್ವದಾಖಲೆ ಮಾಡಿ
ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಇದೆ. ಅಂದು ಏಕಕಾಲದಲ್ಲಿ ದೇಶದೆಲ್ಲೆಡೆ ಯೋಗ' ಮಾಡುವ ಮೂಲಕ ವಿಶ್ವ ದಾಖಲೆ ಮಾಡಿ..

ನವದೆಹಲಿ: ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಇದೆ. ಅಂದು ಏಕಕಾಲದಲ್ಲಿ ದೇಶದೆಲ್ಲೆಡೆ ಯೋಗ' ಮಾಡುವ ಮೂಲಕ ವಿಶ್ವ ದಾಖಲೆ ಮಾಡಿ ಎಂದು ಪ್ರಧಾನಿ ಮೋದಿ ಎನ್‍ಸಿಸಿ ಕೆಡೆಟ್‍ಗಳಿಗೆ ಸಲಹೆ ನೀಡಿದ್ದಾರೆ.
ಎನ್‍ಸಿಸಿ ಕೆಡೆಟ್‍ಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಯೋಗ ಸಹಿತ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು. ಯೋಗವನ್ನು ಅರ್ಥೈಸಿಕೊಂಡವರಿಗೆ ಮತ್ತು ಅಭ್ಯಾಸ ಮಾಡಿಕೊಂಡವರಿಗೆ ಇದೊಂದು ಹೆಮ್ಮೆಯ ವಿಷಯವೂ ಹೌದು. ಯೋಗಕ್ಕೆ ಯಾವುದೇ ಮಿತಿಯಾಗಲಿ, ವಯಸ್ಸಾಗಲಿ ಅಥವಾ ಭಾಷೆಯಾಗಲಿ ಇಲ್ಲ. ಯೋಗ'ದ ಹುಟ್ಟು ಭಾರತದಲ್ಲೇ ಆಗಿದೆ.
ಈಗ ಇದನ್ನು ವಿಶ್ವಕ್ಕೆ ಪರಿಚಯಿಸಲು ಸೂಕ್ತ ಸಮಯ. ಇದು ಭಾರತದ ವಿಶೇಷ ಜವಾಬ್ದಾರಿ ಕೂಡ. ಜೂ. 21ಕ್ಕೆ ಇನ್ನೂ ಕಾಲಾವಕಾಶ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಒಂದೇ ಸಮಯಕ್ಕೆ ದೇಶಾದ್ಯಂತ ಯೋಗ ಪ್ರದರ್ಶಿಸಿದರೆ, ವಿಶ್ವ ದಾಖಲೆ ಮಾಡಬಹುದು. ಹೀಗಾಗಿ ಈ ಬಗ್ಗೆ ಯೋಜಿನೆ ರೂಪಿಸಲು ಈಗಲೇ ಪ್ರಾರಂಭಿಸಿ. ಕೆಡೆಟ್‍ಗಳು ಸ್ವಚ್ಛತೆ ಬಗ್ಗೆಯೂ ಗಮನಹರಿಸಬೇಕು. ಈ ಮೂಲಕ ದೇಶ ಸೇವೆ ಮಾಡಬಹುದು ಎಂದು ಕರೆ ನೀಡಿದ್ದಾರೆ.
ನಾನು ಎನ್‍ಸಿಸಿಯಲ್ಲಿದ್ದೆ
ತಮ್ಮ ವಿದ್ಯಾರ್ಥಿ ಜೀವನವನ್ನು ನೆನೆಸಿಕೊಂಡ ಪ್ರಧಾನಿ ಮೋದಿ, ನಾನೂ ಸಹ ವಿದ್ಯಾರ್ಥಿದೆಸೆಯಲ್ಲಿ ಎನ್‍ಸಿಸಿ ಸೇರಿಕೊಂಡಿದ್ದೆ. ಈ ವೇಳೆ ನಾನು ಸಾಕಷ್ಟು ಕಲಿತಿದ್ದೇನೆ. ರಾಷ್ಟ್ರಭಕ್ತಿ, ಮೌಲ್ಯ ಹಾಗೂ ಜೀವನ ಕ್ರಮವನ್ನು ಎನ್ ಸಿಸಿ ಹೇಳಿಕೊಟ್ಟಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


