ದೇಶ

ಬ್ರಿಟನ್ ಗಾಂಧಿ ಪ್ರತಿಮೆಗೆ ಇನ್ಫಿ ನಾರಾಯಣ ಮೂರ್ತಿ ರು. 1.86 ಕೋಟಿ ದೇಣಿಗೆ

ಬ್ರಿಟನ್‍ನ ಪಾರ್ಲಿಮೆಂಟ್ ಸ್ಕೇರ್‍ನಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆ ನಿರ್ಮಾಣ ಮಾಡುವ ಸಲುವಾಗಿ ಬೆಂಗಳೂರಿನ ಇನ್ಫೋಸಿಸ್ ...

ಬ್ರಿಟನ್ ಗಾಂಧಿ  ಪ್ರತಿಮೆಗೆ ಇನ್ಫಿ ನಾರಾಯಣ ಮೂರ್ತಿ ರು. 1.86 ಕೋಟಿ ದೇಣಿಗೆ
ನಾರಾಯಣ ಮೂರ್ತಿ
Published On :

ಲಂಡನ್: ಬ್ರಿಟನ್‍ನ ಪಾರ್ಲಿಮೆಂಟ್ ಸ್ಕೇರ್‍ನಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆ ನಿರ್ಮಾಣ  ಮಾಡುವ ಸಲುವಾಗಿ ಬೆಂಗಳೂರಿನ ಇನ್ಫೋಸಿಸ್  ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಅವರ ಕುಟುಂಬ ರು 1.86 ಕೋಟಿ ದೇಣಿಗೆ ನೀಡಿದೆ.
ಸರಿಸುಮಾರು ರು 70 ಕೋಟಿ ವೆಚ್ಚದಲ್ಲಿ ಗಾಂಧಿ ಪ್ರತಿಮೆ  ನಿರ್ಮಾಣದ
ಯೋಜನೆ   ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ನಾರಾಯಣ ಮೂರ್ತಿ, ಪತ್ನಿ ಸುಧಾಮೂರ್ತಿ ಮತ್ತು ಮಕ್ಕಳಾದ ಅಕ್ಷತಾ  ಹಾಗೂ ರೋಹನ್ ಮೂರ್ತಿ ಸೇರಿ ರು 1.86 ಕೋಟಿ ದೇಣಿಗೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ  ನೀಡಿರುವ ನಾರಾಯಣ ಮೂರ್ತಿ, ನಾಯಕತ್ವದ
ವಿಚಾರ ಬಂದಾಗ ಎಲ್ಲರೂ ಮಹಾತ್ಮ ಗಾಂಧೀಜಿ ಅವರನ್ನು ಉದಾಹರಿಸುತ್ತಾರೆ. ಕಾರಣ, ಅವರಲ್ಲಿರುವ ಧೈರ್ಯ ಮತ್ತು ಬದ್ಧತೆ ಯುನಮಗೆ ಸ್ಪೂರ್ತಿ ಯಾಗಿದೆ. ಹೀಗಾಗಿ ಇಂಥ ನಾಯಕನ ಪ್ರತಿಮೆಅನಾವರಣಗೊಳ್ಳಲು ನಾನು ಕೈಜೋಡಿಸುತ್ತಿರುವ ಬಗ್ಗೆ ಅತೀವ ಸಂತಸ ಇದೆ' ಎಂದು ಹೇಳಿದ್ದಾರೆ. ಇದಕ್ಕಾಗಿ ಗಾಂಧಿ ಪ್ರತಿಮೆ ಟ್ರಸ್ಟ್ ಅನ್ನು ಅನಿವಾಸಿ ಭಾರತೀಯ
ಲಾರ್ಡ್ ಮೇಘಾನಂದ್ ದೇಸಾಯಿ ಅವರು ಸ್ಥಾಪಿಸಿದ್ದು, ನಿಧಿ ಸಂಗ್ರಹದಲ್ಲಿ ನಿರತರಾಗಿದ್ದಾರೆ. ಇದೀಗ ನಿಧಿ ಸಂಗ್ರಹ ಕಾರ್ಯಪೂರ್ಣಗೊಂಡಿದ್ದು, ಸದ್ಯದಲ್ಲೇ ಕೆಲಸ ಪ್ರಾರಂಬಿsಸುವ ಸಾಧ್ಯತೆ ಇದೆ. ಇನ್ಫಿ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ನೀಡಿದ ಈ ದೇಣಿಗೆಯು ಭಾರತ ಮತ್ತು ಬ್ರಿಟನ್ ನಡುವಿನ ಐತಿಹಾಸಿಕ ಸಂಬಂಧವನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ಇದಲ್ಲದೆ ಮಹಾತ್ಮ ಗಾಂಧಿ  ಅವರ ಮೇಲಿರುವ ಗೌರವ ಮತ್ತು ಪಾರ್ಲಿಮೆಂಟ್ ಸ್ಕೇರ್‍ನಲ್ಲಿ ಅವರ ಪ್ರತಿಮೆ ಸ್ಥಾಪಿಸುತ್ತಿರುವ ಹಿಂದಿನ ಪ್ರಾಮುಖ್ಯತೆಯನ್ನೂತೋರಿಸುತ್ತದೆ' ಎಂದು ದೇಸಾಯಿ ಹೇಳಿದ್ದಾರೆ. ಭಾರತದ ಕೈಗಾರಿಕೋದ್ಯಮಿ ಬಜಾಜ್ ಆಟೋ ಮುಖ್ಯಸ್ಥ ರಾಹುಲ್ ಬಜಾಜ್ ಹಾಗೂ ಅನಿವಾಸಿ ಉದ್ಯಮಿ ರಾಮಿ ರೇಂಜರ್ ಈ ಪ್ರತಿಮೆಗೆ ಸಾಕಷ್ಟು ದೇಣಿಗೆ ನೀಡಿದ್ದಾರೆ. ಜತೆಗೆ ಗಾಂಧೀಜಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಸಹ ಟ್ರಸ್ಟಿಯಲ್ಲೊಬ್ಬರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.