ದೇಶ

ಡ್ರೋಣ್ ನಿರ್ಮಾಣ ಅವಕಾಶ ಬೆಂಗಳೂರಿಗೆ?

ವಿಶ್ವದ ಅತ್ಯಂತ ಸುಧಾರಿತ ಡ್ರೋಣ್ ತಯಾರಿಸುವ ಅವಕಾಶ ಬೆಂಗಳೂರಿಗೆ ಲಭ್ಯವಾಗಲಿದೆಯೇ...

ಡ್ರೋಣ್ ನಿರ್ಮಾಣ ಅವಕಾಶ ಬೆಂಗಳೂರಿಗೆ?
Published On :

ನವದೆಹಲಿ: ವಿಶ್ವದ ಅತ್ಯಂತ ಸುಧಾರಿತ ಡ್ರೋಣ್ ತಯಾರಿಸುವ ಅವಕಾಶ ಬೆಂಗಳೂರಿಗೆ ಲಭ್ಯವಾಗಲಿದೆಯೇ?

ಎಲ್ಲವೂ ಅಂದುಕೊಂಡಂತೆ ನಡೆದರೆ ಅಮೆರಿಕ ಅಧ್ಯಕ್ಷ ಒಬಾಮ ಹಾಗೂ ನಮ್ಮ ಪ್ರಧಾನಿ ನರೇಂದ್ರಮೋದಿ ಅವರು ಸದ್ಯದಲ್ಲೇ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ. 10 ಕಿ.ಮೀ. ವ್ಯಾಪ್ತಿಯ ರೇವನ್ ಮಾನವರಹಿತ ಡ್ರೋಣ್(ಯುಎವಿ) ಈವರೆಗೆ ಅಮೆರಿಕ ದಲ್ಲೇ ತಯಾರಾಗುತ್ತಿತ್ತು. ಆದರೆ ಇನ್ನು ಮುಂದೆ ಅಂದರೆ ವರ್ಷಾಂತ್ಯದಲ್ಲಿ ಇದನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತಿದ್ದು, ಭಾರತ ಮತ್ತು ಅಮೆರಿಕ ಜಂಟಿಯಾಗಿ ರೇವನ್ ಡ್ರೋಣ್ ತಯಾರಿಸಲಿದೆ ಎಂದು ಮೂಲಗಳು ತಿಳಿಸಿವೆ. ಇದು ನಿಜವಾದರೆ ಬರೋಬ್ಬರಿ 18 ಸಾವಿರ ಕೋಟಿ ಆರ್ಡರ್ ಭಾರತಕ್ಕೆ ಸಿಗಲಿದೆ.

ಏಕೆಂದರೆ, ಏರೋ ವಿರೋನ್ಮೆಂಟ್ ತಯಾರಿಸುತ್ತಿರುವ ಈ ಡ್ರೋಣ್‍ಗಾಗಿ ಸುಮಾರು 7 ರಾಷ್ಟ್ರಗಳು ಕಾಯುತ್ತಿವೆ. ಇನ್ನು ಮುಂದೆ ಭಾರತ ಮತ್ತು ಅಮೆರಿಕ ಜಂಟಿಯಾಗಿ ತಯಾರಿಸಲಿರುವ ಡ್ರೋಣ್‍ನ ಹಾರಾಟ ಸಾಮರ್ಥ್ಯ 4ರಿಂದ 6 ಗಂಟೆಗೆ ವಿಸ್ತರಿಸಲಾಗುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಡ್ರೋಣ್ ವೈಶಿಷ್ಟ್ಯವೇನು? ಈ ಬ್ಯಾಟರಿಚಾಲಿತ ಡ್ರೋಣ್ ಎಲ್ಲ ವಾತಾವರಣದಲ್ಲೂ, ಎಂತಹ ಪ್ರದೇಶದಲ್ಲೂ ಸಂಚರಿಸುವಂಥದ್ದು. ಇದು ರಣಾಂಗಣವನ್ನು ಹೆಚ್ಚು ಪಾರದರ್ಶಕವಾಗಿಸಿ, ಶತ್ರುಗಳಿರುವ ಪ್ರದೇಶಗಳ ಮೇಲೆ ಸುಲಭದಲ್ಲಿ ದಾಳಿ ಮಾಡುತ್ತದೆ. ಇದು ದೀರ್ಘ ವ್ಯಾಪ್ತಿಯ ಬೇಹುಗಾರಿಕಾ ಯಂತ್ರವಾಗಿಯೂ, ಏರ್ ಆ್ಯಂಬುಲೆನ್ಸ್ ಆಗಿಯೂ ಕಾರ್ಯನಿರ್ವಹಿಸಬಲ್ಲದು. ಬತ್ತದ ಗದ್ದೆಯಲ್ಲೂ ಇಳಿಯುವ ಸಾಮರ್ಥ್ಯ ರೇವನ್‍ಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.