ದೇಶ

ಜಯಾ ಬಳಿ ಇದೆ 1,250 ಕೆ.ಜಿ ಬೆಳ್ಳಿ

ಜಯಲಲಿತಾ ಬಳಿ ಇರುವ ಬೆಳ್ಳಿ 1,116 ಕೆ.ಜಿ.ಯಲ್ಲ. ಬದಲಾಗಿ 1,250 ಕೆ.ಜಿ!

ಜಯಾ ಬಳಿ ಇದೆ 1,250 ಕೆ.ಜಿ ಬೆಳ್ಳಿ
Published On :

ಬೆಂಗಳೂರು: ಜಯಲಲಿತಾ ಬಳಿ ಇರುವ ಬೆಳ್ಳಿ 1,116 ಕೆ.ಜಿ.ಯಲ್ಲ. ಬದಲಾಗಿ 1,250 ಕೆ.ಜಿ!

ಹೀಗಂತ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಮೇಲ್ಮನವಿ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಜಯಲಲಿತಾ ಪರವಾದ ಮಂಡಿಸುತ್ತಿರುವ ವಕೀಲ ಎಲ್. ನಾಗೇಶ್ವರರಾವ್ ಅವರೇ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ತಮಿಳುನಾಡಿನ ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ದಳ(ಡಿವಿಎಸಿ) ನೀಡಿದ ಮಾಹಿತಿಗಿಂತಲೂ ಅವರ ಬಳಿ ಹೆಚ್ಚಿನ ಬೆಳ್ಳಿ ವಡವೆಗಳಿವೆ ಎಂಬುದನ್ನು ಇವರೇ ಬಹಿರಂಗಪಡಿಸಿದ್ದು, ಬಹುತೇಕ ಉಡುಗೊರೆ ರೂಪದಲ್ಲಿ ಬಂದಿದ್ದು ಎಂದು ಹೇಳಿದ್ದಾರೆ.

ತಮಿಳುನಾಡಿನ ಜನರು ತಮ್ಮಿಷ್ಟದ ನಾಯಕರಿಗೆ ಉಡುಗೊರೆ ನೀಡುವುದು ಸಾಮಾನ್ಯ. ಜಯಾಗೂ ಸುಮಾರು ರು.1.5 ಕೋಟಿ ನಗದು ಉಡುಗೊರೆ ರೂಪದಲ್ಲಿ ಬಂದಿದೆ ಎಂದರು.

ಅಲ್ಲದೇ ಅವರ ಬಳಿ ಇರುವ ಆಸ್ತಿ ಹಾಗೂ ಆದಾಯಕ್ಕೆ ಸಂಬಂಧಿಸಿದಂತೆ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುತ್ತಿದ್ದು, ಡಿವಿವಿಸಿ ನೀಡಿರುವ ಮಾಹಿತಿ ಸತ್ಯಕ್ಕೆ ದೂರವಾಗಿದೆ ಎಂದು ವಾದ ಮಂಡಿಸಿದರು. ವಿಶೇಷ ನ್ಯಾಯಪೀಠದ ನ್ಯಾ.ಸಿ.ಆರ್.ಕುಮಾರಸ್ವಾಮಿ ಅವರ ಏಕಸದಸ್ಯ ಪೀಠ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.