ಬೆಂಗಳೂರಿನ ಜಿಪ್‌ಡಯಲ್ ಟ್ವಿಟರ್ ತೆಕ್ಕೆಗೆ
ಬೆಂಗಳೂರು ಮೂಲದ ಮಾರ್ಕೆಟಿಂಗ್ ಮತ್ತು ವಿಶ್ಲೇಷಣಾ ಸಂಸ್ಥೆ 'ಜಿಪ್ ಡಯಲ್' ಅನ್ನು ಸಾಮಾಜಿಕ...

ನವದೆಹಲಿ: ಬೆಂಗಳೂರು ಮೂಲದ ಮಾರ್ಕೆಟಿಂಗ್ ಮತ್ತು ವಿಶ್ಲೇಷಣಾ ಸಂಸ್ಥೆ 'ಜಿಪ್ ಡಯಲ್' ಅನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್ ಖರೀದಿಸಿದೆ. 30 ರಿಂದ 40 ದಶಲಕ್ಷ ಡಾಲರ್‌ಗೆ ಈ ಖರೀದಿ ಪ್ರಕ್ರಿಯೆ ನಡೆದಿದೆ ಎಂದು ಹೇಳಲಾಗಿದೆ.
ಜಿಪ್‌ಡಯನ್ ಅನ್ನು 2010ರಲ್ಲಿ ವಲೆರಿ ವ್ಯಾಗನರ್ (ಸಿಇಒ), ಅಮಿಯಾ ಪಾಠಕ್ (ಸಿಇಒ) ಮತ್ತು ಸಂಜಯ್ ಸ್ವಾಮಿ (ಮುಖ್ಯಸ್ಥ ಹಾಗೂ ಹೂಡಿಕೆಗಾರ) ಸ್ಥಾಪಿಸಿದ್ದರು. ಇದೊಂದು ದೇಶದ ವಿಶಿಷ್ಟ 'ಮಿಸ್ ಕಾಲ್' ಮಾರ್ಕೆಟಿಂಗ್ ವೇದಿಕೆಯಾಗಿದೆ.
ಜಿಪ್ ಡಯಲ್‌ನ ನಂಬರ್‌ಗೆ ಕರೆ ಮಾಡಿದರೆ ಇಂಟರ್ನೆಟ್ ಸಂಪರ್ಕ ಇಲ್ಲದೆ ಮೊಬೈಲ್ ಗ್ರಾಹಕರು ತಮ್ಮ ನೆಚ್ಚಿನ ನಟರ ಜತೆಗೆ ಸಂಪರ್ಕದಲ್ಲಿರಬಹುದು, ಅವರ ವಾಯ್ಸ್ ಕಾಲ್ ಅನ್ನು ಆಲಿಸಬಹುದು. ಬಾಲಿವುಡ್ ನಟರಾದ ಶಾರುಖ್ ಖಾನ್, ಅಮಿತಾಭ್ ಬಚ್ಚನ್, ರಜನಿಕಾಂತ್ ಮತ್ತು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಂಥ ಧಾರ್ಮಿಕ ನಾಯಕರೂ ಜಿಪ್ ಡಯಲ್ ಮೂಲಕ ತಮ್ಮ ಅಭಿಮಾನಿಗಳ ಜತೆಗೆ ಸಂಪರ್ಕದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


