18 ವರ್ಷಗಳ ಬಳಿಕ ಕೈ ಸಮಿತಿ ಚುನಾವಣೆ?
ಪಕ್ಷದಲ್ಲಿ ಸುಮಾರು 18 ವರ್ಷಗಳ ಹಿಂದೆ ಇದ್ದ ಅಭ್ಯಾಸವನ್ನು ಮತ್ತೆ ಜಾರಿಗೆ ತರಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಮುಂದಾಗಿರುವುದು...

ನವದೆಹಲಿ: ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗುವತ್ತ ಗಮನ ನೆಟ್ಟಿದ್ದಾರೆಯೇ?
ಪಕ್ಷದಲ್ಲಿ ಸುಮಾರು 18 ವರ್ಷಗಳ ಹಿಂದೆ ಇದ್ದ ಅಭ್ಯಾಸವನ್ನು ಮತ್ತೆ ಜಾರಿಗೆ ತರಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಮುಂದಾಗಿರುವುದು ಈ ಅನುಮಾನವನ್ನು ಮೂಡಿಸಿದೆ.
18 ವರ್ಷಗಳ ಬಳಿಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ)ಗೆ ಚುನಾವಣೆ ನಡೆಸಲು ಅವರು ನಿರ್ಧರಿಸಿದ್ದಾರೆ.
ಜೂನ್ ಅಥವಾ ಜುಲೈನಲ್ಲಿ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಾದ ಬಳಿಕ ನಡೆಯುವ ಎಐಸಿಸಿ ಮಹಾಧಿವೇಶನ (ಮಾರ್ಚ್-ಏಪ್ರಿಲ್)ದಲ್ಲಿ ಸಿಡಬ್ಲ್ಯುಸಿ ಮರುಸ್ಥಾಪಿಸಲು ರಾಹುಲ್ ಉತ್ಸುಕರಾಗಿದ್ದಾರೆ. ಒಂದು ವೇಳೆ ಪಕ್ಷವು ರಾಹುಲ್ರ ನಿರ್ಧಾರವನ್ನು ಅನುಸರಿಸಿದ್ದೇ ಆದಲ್ಲಿ. ಪಕ್ಷದಲ್ಲಿ 2 ದಶಕಗಳ ಬಳಿಕ ಅತಿದೊಡ್ಡ ಸುಧಾರಣೆ ತಂದಂತಾಗಲಿದೆ.
ಈ ಹಿಂದೆ ಸಿಡಬ್ಯ್ಲುಸಿ ಚುನಾವಣೆ ನಡೆದಿದ್ದು 1997ರ್ಲಲಿ. ಆಘ ಸೀತಾರಾಂ ಕೇಸರಿ ಅವರು ಪಕ್ಷದ ಅಧ್ಯಕ್ಷರಾಗಿದ್ದರು. ಅದಕ್ಕೂ ಮೊದಲು 1992ರಲ್ಲಿ ಚುನಾವಣೆ ನಡೆಸಲಾಗಿತ್ತು.
ಕಾಂಗ್ರೆಸ್ನ ಸಂವಿಧಾನದ ಪ್ರಕಾರ, 25 ಸದಸ್ಯರ ಸಿಡಬ್ಲ್ಯುಸಿ ಪೈಕಿ 12 ಮಂದಿಯನ್ನು ಎಐಸಿಸಿ ಆಯ್ಕೆ ಮಾಡುತ್ತದೆ. ಉಳಿದವರನ್ನು ಪಕ್ಷದ ಅಧ್ಯಕ್ಷರು ನೇಮಕ ಮಾಡುತ್ತಾರೆ. 1998ರಲ್ಲಿ ಪಕ್ಷದ ಅಧ್ಯಕ್ಷರಾಗಿ ಸೋನಿಯಾ ಅವರು ಅಧಿಕಾರವಹಿಸಿಕೊಂಡ ಬಳಿಕ ಸಿಡಬ್ಯ್ಲುಸಿ ಚುನಾವಣೆಯೇ ನಡೆದಿಲ್ಲ.
ಹಲವು ಬದಲಾವಣೆಗಳಿಗೆ ಚಿಂತನೆ:
ಇದೇ ವೇಳೆ, ಸಿಡಬ್ಯ್ಲುಸಿ ಆಯ್ಕೆ ಪ್ರಕ್ರಿಯೆ ವೇಳೆ ಪಕ್ಷದಲ್ಲಿ ಕೆಲವೊಂದು ಮಹತ್ತರ ಬದಲಾವಣೆ ತರುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಪಕ್ಷದ ಸಂವಿಧಾನದಲ್ಲಿ ತಿದ್ದುಪಡಿ ತಂದು ರಾಜ್ಯ ಮತ್ತು ಜಿಲ್ಲಾ ಸಮಿತಿಗಳಲ್ಲಿ ಒಬಿಸಿ, ಎಸ್ಸಿ, ಎಸ್ಟಿಗಳು ಹಾಗೂ ಅಲ್ಪಸಂಖ್ಯಾತರಿಗೆ ಶೇ.50 ಮೀಸಲಾತಿ, ಪದಾಧಿಕಾರಿಗಳ ಅಧಿಕಾರಾವಧಿ 5ರಿಂದ 3 ವರ್ಷಕ್ಕಿಳಿಸಬೇಕು ಎಂಬ ಸಲಹೆಗಳೂ ಕೇಳಿ ಬಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


