ಪ್ರಾಣಕ್ಕೆ ಕುತ್ತಾದ ವಿಡಿಯೋ ಗೇಮ್
ತೈವಾನ್ ನಲ್ಲಿ ವ್ಯಕ್ತಿಯೊಬ್ಬ ಮೂರು ದಿನಗಳ ಕಾಲ ವಿಡಿಯೋ ಗೇಮ್ ಆಡುವ ಮೂಲಕ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ತೈಪೆ: ತೈವಾನ್ ನಲ್ಲಿ ವ್ಯಕ್ತಿಯೊಬ್ಬ ಮೂರು ದಿನಗಳ ಕಾಲ ವಿಡಿಯೋ ಗೇಮ್ ಆಡುವ ಮೂಲಕ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ತೈವಾನ್ ನ ಕೋಹ್‌ಸಿಯಂಗ್ ನಗರದಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಹ್ಸೀ ಎಂದು ಗುರುತಿಸಲಾಗಿದೆ. ನಗರದ ಪ್ರಮುಖ ಸೈಬರ್ ಕೆಫೆಯಲ್ಲಿ ಹ್ಸೀ ಮೃತ ಪಟ್ಟಿದ್ದು, ಸೈಬರ್ ಕೆಫೆಯ ಸಿಬ್ಬಂದಿಯೊರ್ವ ಚಲನರಹಿತವಾಗಿ ಕುಳಿತಿದ್ದ ಹ್ಸೀ ಯನ್ನು ಕಂಡು ಆತನನ್ನು ಎಬ್ಬಿಸಲು ಪ್ರಯತ್ನಿಸಿದಾಗ ವಿಚಾರ ತಿಳಿದುಬಂದಿದೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಯಿತು. ಪರೀಕ್ಷೆ ನಡೆಸಿದ ವೈದ್ಯರು ಹ್ಸೀ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ನಿರಂತರವಾಗಿ ವಿಡಿಯೋ ಗೇಮ್‌ನಲ್ಲಿ ತೊಡಗಿದ್ದರಿಂದ ಹ್ಸೀ ಗೆ ಹೃದಯಾಘಾತವಾಗಿ, ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ವರದಿ ನೀಡಿದ್ದಾರೆ ಎಂದು ತೈಪೆ ಟೈಮ್ಸ್ ವರದಿ ಮಾಡಿದೆ. ಈ ಸೈಬರ್ ಕೆಫೆಗೆ ಹ್ಸೀ ಸಾಮಾನ್ಯ ಗ್ರಾಹಕನಾಗಿದ್ದು, ಆಗಾಗ್ಗ ಸೈಬರ್ ಕೆಫೆಗೆ ಬಂದು ವಿಡಿಯೋ ಗೇಮ್ ಆಡುತ್ತಿದ್ದನು ಎಂದು ಸೈಬರ್ ಕೆಫೆಯ ಮಾಲೀಕರು ತಿಳಿಸಿದ್ದಾರೆ.
ಒಟ್ಟಾರೆ ವಿಡಿಯೋ ಗೇಮ್ ಹುಚ್ಚು ಆತನ ಪ್ರಾಣಕ್ಕೆ ಎರವಾಗಿದ್ದು ಮಾತ್ರ ವಿಪರ್ಯಾಸವೇ ಸರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


