ಬಂಗಾಳದಲ್ಲಿ 200 ಕಚ್ಚಾ ಬಾಂಬ್ ವಶ: ಇಬ್ಬರ ಬಂಧನ

ಬೀರ್‌ಭೂಮ್(ಪಶ್ಚಿಮಬಂಗಾಳ): ಪಶ್ಚಿಮ ಬಂಗಾಳದದ ಬೀರ್‌ಭೂಮ್ ಜಿಲ್ಲೆಯ ಪುರೂಯಿ ಎಂಬಲ್ಲಿ 200 ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪಶ್ಚಿಮಬಂಗಾಳದ ಪೊಲೀಸರು ತಿಳಿಸಿದ್ದಾರೆ.
ಬೀರ್‌ಭೂಮ್ ಜಿಲ್ಲೆಯ ಪಲ್ಯಾಗ್ರಾಮದ ಬಳಿ ಪ್ಲಾಸ್ಟಿಕ್ ಕಂಟೈನರ್‌ವೊಂದರಲ್ಲಿ ಈ ಬಾಂಬ್‌ಗಳನ್ನು ಅಡಗಿಸಿಡಲಾಗಿತ್ತು. ಈ ಬಾಂಬ್‌ಗಳನ್ನು ಇಂದು ಬೆಳಿಗ್ಗೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಬೀರ್‌ಭೂಮ್ ಜಿಲ್ಲೆಯ ಸತೋರೆ ಎಂಬಲ್ಲಿ 70 ಕಚ್ಚಾ ಬಾಂಬ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದೀಗ ಇಲ್ಲೇ 200 ಕಚ್ಚಾ ಬಾಂಬ್‌ಗಳು ಸಿಕ್ಕಿರುವುದು ಆತಂಕಕ್ಕೆ ಕಾರಣವಾಗಿದೆ.
2014ರ ಅಕ್ಟೋಬರ್‌ನಲ್ಲಿ ನಡೆದಿದ್ದ ಬುರ್‌ದ್ವಾನ್ ಸ್ಫೋಟ ಹಾಗೂ ಇದೀಗ ಸಿಕ್ಕಿರುವ ಕಚ್ಚಾ ಬಾಂಬ್‌ಗಳ ಪ್ರಕರಣ ನಡುವೆ ಯಾವುದೇ ಸಂಪರ್ಕ ಇರುವ ಬಗ್ಗೆ ಮಾಹಿತಿ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


