ಮತದಾರರ ಪಟ್ಟಿ ತಿದ್ದುಪಡಿಗೆ ಚುನಾವಣಾ ಆಯೋಗ ಕಸರತ್ತು

ನವದೆಹಲಿ: ಮತದಾರರ ಪಟ್ಟಿ ತಿದ್ದುಪಡಿ, ಹೊಸದಾಗಿ ಸೇರ್ಪಡೆ ಹಾಗೂ ಹೆಸರು ತೆಗೆದುಹಾಕಲು ಚುನಾವಣಾ ಆಯೋಗವು ರಾಷ್ಟ್ರೀಯ ಮಟ್ಟದ ದಾಖಲೆ ಪಟ್ಟಿಯೊಂದನ್ನು ಸಿದ್ಧಪಡಿಸಲು ನಿರ್ಧರಿಸಿದೆ.
ಈ ಮಾಹಿತಿಯನ್ನು ರಾಷ್ಟ್ರೀಯ ದಾಖಲೆ ಕೇಂದ್ರದಲ್ಲೂ ಆಯೋಗ ಸಂಗ್ರಹಿಸಿಡಲಿದೆ. ಇದಲ್ಲದೆ ಈ ರಾಷ್ಟ್ರೀಯ ದಾಖಲೆಯಿಂದಾಗಿ ಮತದಾರರಿಗೆ ಹೆಸರು ಹುಡುಕಾಟ, ಸಂಬಂಧಪಟ್ಟ ಬ್ಲಾಕ್ ಹಂತದ ಅಧಿಕಾರಿಯ ಹೆಸರು ತಿಳಿದುಕೊಳ್ಳುವುದು, ಕ್ಷೇತ್ರದ ಹೆಸರು ಮತ್ತು ಸಂಖ್ಯೆ ಹಾಗೂ ಮತದಾರರಿಗೆ ಸಂಬಂಧಿಸಿದ ಮಾಹಿತಿ ಪಡೆಯುವುದು ಸುಲಭವಾಗಲಿದೆ.
ಜತೆಗೆ, ಹೊಸದಾಗಿ ಹೆಸರು ನೋಂದಾಣಿ ಮಾಡಲು, ತಿದ್ದುಪಡಿ ಮತ್ತು ಹೆಸರು ತೆಗೆದುಹಾಕುವ ಸಂಬಂಧ ಅರ್ಜಿ ಸಲ್ಲಿಸಲೂ ಅನುಕೂಲವಾಗಲಿದೆ. ಮತದಾರರಿಗೆ ವಿವಿಧ ಸೇವೆ ಒದಗಿಸುವ ಏಕಗವಾಕ್ಷಿ ಸೇವೆ ಇದಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


