ಬೇಹು: ಜೆಪಿಸಿ ತನಿಖೆಗೆ ಒತ್ತಾಯ
ಕಾರ್ಪೊರೇಟ್ ಬೇಹುಗಾರಿಕೆ ಪ್ರಕರಣ ಸಂಸತ್‍ನಲ್ಲೂ ಪ್ರತಿಧ್ವನಿಸಿದೆ. ಪೆಟ್ರೋಲಿಯಂ, ವಿದ್ಯುತ್, ಕಲ್ಲಿದ್ದಲು ಮತ್ತು ರಕ್ಷಣಾ ಸಚಿವಾಲಯಗಳಲ್ಲಿ ನಡೆದಿದೆಯೆನ್ನಲಾದ ಬೇಹುಗಾರಿಕೆ ಬಗ್ಗೆ ತನಿಖೆ...

ನವದೆಹಲಿ: ಕಾರ್ಪೊರೇಟ್ ಬೇಹುಗಾರಿಕೆ ಪ್ರಕರಣ ಸಂಸತ್‍ನಲ್ಲೂ ಪ್ರತಿಧ್ವನಿಸಿದೆ. ಪೆಟ್ರೋಲಿಯಂ, ವಿದ್ಯುತ್, ಕಲ್ಲಿದ್ದಲು ಮತ್ತು ರಕ್ಷಣಾ ಸಚಿವಾಲಯಗಳಲ್ಲಿ ನಡೆದಿದೆಯೆನ್ನಲಾದ ಬೇಹುಗಾರಿಕೆ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ರಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಸರ್ಕಾರವು ಬೇಹು ಪ್ರಕರಣಕ್ಕೆ ಸಂಬಂಧಿಸಿ ಮೌನವಹಿಸಿದೆ. ಸತ್ಯ ಹೊರ ಬರಬೇಕೆಂದರೆ ಜೆಪಿಸಿ ರಚಿಸಲೇಬೇಕು ಎಂದಿದ್ದಾರೆ. ಇದೇ ವೇಳೆ, ಬೇಹುಗಾರಿಕೆ ಆರೋಪಿಗಳಿಗೆ ನಕಲಿ ಗುರುತಿನ ಚೀಟಿ ಒದಗಿಸಿದ್ದ ಆರೋಪದಲ್ಲಿ ರಕ್ಷಣಾ ಸಚಿವಾಲಯದ ಸಿಬ್ಬಂದಿಯೊಬ್ಬನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಈತನನ್ನು ದೆಹಲಿ ನ್ಯಾಯಾಲಯ ದಿನದ ಮಟ್ಟಿಗೆ ಪೊಲೀಸ್ ವಶಕ್ಕೊಪ್ಪಿಸಿದೆ. ಇತರೆ 5 ಮಂದಿ ಕಾರ್ಪೊರೇಟ್ ಅಧಿಕಾರಿಗಳ ನ್ಯಾಯಾಂಗ ಬಂಧನವನ್ನು ಮಾ.5ರವರೆಗೆ ವಿಸ್ತರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


