ಅರುಣಾಚಲ-ದೆಹಲಿ ರೈಲಿಗೆ ಚಾಲನೆ
ಅರುಣಾಚಲ ಪ್ರದೇಶದ ನಹಾರ್‍ಲಗುನ್‍ನಿಂದ ದೆಹಲಿಗೆ ತೆರಳಿದ ನವದೆಹಲಿ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು...

ಇಟಾನಗರ್: ಅರುಣಾಚಲ ಪ್ರದೇಶದ ನಹಾರ್‍ಲಗುನ್‍ನಿಂದ ದೆಹಲಿಗೆ ತೆರಳಿದ ನವದೆಹಲಿ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ನಹಾರ್‍ಲಗೂನ್‍ನಿಂದ ದೆಹಲಿಗೆ ಇದು ಮೊದಲ ಎಕ್ಸ್ ಪ್ರೆಸ್ ರೈಲಾಗಿದೆ. ಇಂದಿರಾ ಗಾಂಧಿ ಪಾರ್ಕ್ ನಲ್ಲಿ ಆಯೋಜಿಸಿದ್ದ 29ನೇ ರಾಜ್ಯೋತ್ಸವದಲ್ಲಿ ಅವರು ಪಾಲ್ಗೊಂಡಿದ್ದರು. ದೇಶದ ಈಶಾನ್ಯ ಭಾಗದಲ್ಲಿ ಅರುಣಾಚಲ ಕಡಿಮೆ ಜನಸಂಖ್ಯೆ ಇರುವ ದೊಡ್ಡ ರಾಜ್ಯವಾಗಿದೆ. ಇಲ್ಲಿ ಬೆಳವಣಿಗೆಗೆ ಅತ್ಯುತ್ತಮ ಅವಕಾಶವಿದೆ.
ರಾಜ್ಯದಲ್ಲಿ 28 ವರ್ಷಗಳಲ್ಲಿ ಆಗದ ಅಭಿವೃದ್ಧಿಯನ್ನು ಮುಂದಿನ 5 ವರ್ಷಗಳಲ್ಲಿ ನೆರವೇರಿಸುತ್ತೇನೆ ಎಂದು ಜನತೆಗೆ ಭರವಸೆ ನೀಡುತ್ತೇನೆ ಎಂದುಪ್ರಧಾನಿ ತಿಳಿಸಿದರು. ಮೋದಿ ಜೊತೆಯಲ್ಲಿ ರೈಲ್ವೇ ಸಚಿವ ಸುರೇಶ್ ಪ್ರಭು, ರಾಜ್ಯ ರೈಲ್ವೇ ಸಚಿವ ಮನೋಜ್ ಸಿನ್ಹಾ ಮತ್ತು ಗೃಹಸಚಿವ ಕಿರಣ್ ರಿಜೂಜು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಹಾರ್ ಲಗೂನ್- ಗುವಾ ಹಟಿ ಇಂಟರ್‍ಸಿಟಿ ರೈಲನ್ನು ಉದ್ಘಾ ಟಿಸಲಾ ಯಿತು. 132 ಕಿಲೋ ವ್ಯಾಟ್ ವಿದ್ಯುತ್ ಪ್ರಸರಣ ಯೋಜನೆಗೆ ಅಡಿಗಲ್ಲು ಹಾಗೂ ಸ್ಥಳೀಯ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗೆ ಕೂಡ ಚಾಲನೆ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


