ಗಡಿ ವಿವಾದ ಬಗೆಹರಿಯದಿದ್ದರೆ, ಒಪ್ಪಂದ ಅಸಾಧ್ಯ: ಚೀನಾ
ವಿವಾದಿತ ಅರುಣಾಚಲ ಪ್ರದೇಶದ ಗಡಿ ವಿವಾದ ಬಗೆಹರಿಯದಿದ್ದರೆ ದ್ವಿಪಕ್ಷೀಯ ಮಾತುಕತೆಗಳು...

ನವದೆಹಲಿ: ವಿವಾದಿತ ಅರುಣಾಚಲ ಪ್ರದೇಶದ ಗಡಿ ವಿವಾದ ಬಗೆಹರಿಯದಿದ್ದರೆ ದ್ವಿಪಕ್ಷೀಯ ಮಾತುಕತೆಗಳು ಯಶಸ್ವಿಯಾಗುವುದಿಲ್ಲ ಎಂದು ಭಾರತಕ್ಕೆ ಚೀನಾ ಬುಧವಾರ ಎಚ್ಚರಿಕೆ ನೀಡಿದೆ.
ಚೀನಾ ಹಾಗೂ ಭಾರತ ನಡುವೆ ಏರ್ಪಟ್ಟಿರುವ ಒಪ್ಪಂದಗಳನ್ನು ಅನುಷ್ಠಾನ ಹಾಗೂ ಪರಸ್ಫರ ಸಹಕಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಫೆ.2 ರಂದು ಭೇಟಿ ನೀಡಿದ್ದರು. ಈ ವೇಳೆ ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ ತಿಂಗಳಲ್ಲಿ ಚೀನಾ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದರು.
ಸುಷ್ಮಾ ಅವರ ಹೇಳಿಕೆ ಪ್ರತಿಕ್ರಿಯಿಸಿರುವ ಭಾರತ-ಚೀನಾ ಸಂಬಂಧ ವೃದ್ಧಿ ತಜ್ಞ ಲ್ಯಾನ್ ಜಿಯಾಂಕ್ಸು , ಅರುಣಾಚಲ ಪ್ರದೇಶ ಗಡಿ ವಿವಾದದಲ್ಲಿ ಭಾರತ ಚೀನಾಗೆ ರಿಯಾಯಿತಿ ನೀಡದಿದ್ದರೆ, ವಿವಾದ ಇತ್ಯರ್ಥವಾಗುವವರೆಗೆ ಚೀನಾ ಯಾವುದೇ ಒಪ್ಪಿಗೆಗಳಿಗೆ ಸಹಕರಿಸುವುದಿಲ್ಲ. ದ್ವಿಪಕ್ಷೀಯ ಸಂಬಂಧ ವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯೊಂದರಲ್ಲಿ ಹೇಳಿಕೆ ನೀಡಿದ್ದಾರೆ.
ಏನಿದು ವಿವಾದ?...
ಅರುಣಾಚಲ ಪ್ರದೇಶ ಗಡಿ ವಿವಾದ ಅರ್ಥಾತ್ ಚೀನಾ-ಭಾರತ ಗಡಿ ವಿವಾದಕ್ಕೆ ಶತಮಾನದ ಇತಿಹಾಸವಿದೆ. ಬ್ರಿಟೀಷರ ಆಳ್ವಿಕೆ ಕಾಲದಿಂದಲೇ ಇದನ್ನು ತಿಳಿಗೊಳಿಸಲು ಪ್ರಯತ್ನಗಳು ನಡೆದಿವೆ ಮತ್ತು ಎಲ್ಲ ಪ್ರಯತ್ನಗಳೂ ವಿಫಲಗೊಂಡಿವೆ. 1912ರಲ್ಲಿ ಚೀನಾ ಗಣರಾಜ್ಯ ಸ್ಥಾಪನೆಯಾದ ಬಳಿಕೆ ಚೀನಾದ ಸೈನ್ಯವನ್ನೇ ಹಿಮ್ಮೆಟ್ಟಿಸಿ ಟಿಬೆಟ್ ಸ್ವಾತಂತ್ರ್ಯ ಘೋಷಿಸಿಕೊಂಡಿತು. ಈ ಘರ್ಷಣೆ ಭಾರತದ ಗಡಿ ಒಳಕ್ಕೂ ನುಸುಳುವ ಸೂಚನೆ ದೊರೆತಾಗ ಚೀನಾ ಮತ್ತು ಟಿಬೆಟ್ ಎರಡನ್ನೂ ಕೂರಿಸಿಕೊಂಡು ತ್ರಿಪಕ್ಷೀಯ ಒಪ್ಪಂದಕ್ಕೆ ಮುಂದಾಯಿತು ಭಾರತ. ಮೊದಲು 1916ರ ಒಪ್ಪಂದಕ್ಕೆ ಸಮ್ಮತಿಸಿದ ಚೀನಾ ಮುಂದೆ ಅದರಿಂದ ಹಿಂದೆ ಸರಿಯಿತು.
ಅರಣಾಚಲ ಪ್ರದೇಶ ಮತ್ತು ಟಿಬೆಟ್ ನಡುವೆ ಮ್ಯಾಕ್ ಮೋಹನ್ ಗಡಿ ರೇಖೆ ಗುರುತಿಸಲಾಯಿತು. ಟಿಬೆಟ್ ಮತ್ತು ಬ್ರಿಟೀಷ್ ಇಂಡಿಯಾ ಇದಕ್ಕೆ ಸಹ ಹಾಕಿದರೂ ಚೀನಾ ಇದನ್ನು ತಿರಸ್ಕರಿಸಿತು. ಅರುಣಾಚಲ ಪೂರ್ತಿ ತನ್ನದೇ ಎನ್ನುವುದರ ಅದರ ವಾದ, ಆದರೆ ಅದರ ಕಣ್ಣೆಲ್ಲಾ ಇರುವುದು ಗಡಿಯಲ್ಲಿರುವ ತವಾಂಗ್ ಜಿಲ್ಲೆಯ ಮೇಲೆ. ಈ ಗಡಿ ರೇಖೆ ಒಪ್ಪಿಕೊಂಡರೆ ತನ್ನ ವಾದ ಕೊನೆಗೊಳ್ಳಲಿದೆ ಎನ್ನುವುದು ಅದರ ನಿಲುವು. 1969ರ ಸಮರದಲ್ಲಿ ಅರುಣಾಚಲ ಪ್ರದೇಶವನ್ನು ಆಕ್ರಮಿಸಿದ್ದ ಚೀನಾ ನಂತರ ತಾನಾಗಿ ಮ್ಯಾಕ್‌ಮೋಹನ್ ಗಡಿಯಾಚೆಗೆ ಹೋಯಿತು. ಆದರೆ, ಈ ಪ್ರದೇಶ ತನ್ನದು ಎನ್ನುವ ಪಟ್ಟನ್ನು ಮಾತ್ರ ಅದು ಸಡಿಸಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


