ದೇಶ

ಕಳ್ಳ ಸಾಗಣೆ ಆರೋಪ: ಏರ್ ಇಂಡಿಯಾ ಸಿಬ್ಬಂದಿಗಳ ಶೋಧ

ಬರೋಬ್ಬರಿ 78 ಲಕ್ಷ ಚಿನ್ನ ಕಳ್ಳ ಸಾಗಣೆ ಆರೋಪದ ಮೇಲೆ ಮುಂಬೈ ವಿಮಾನ ನಿಲ್ದಾಣದಲ್ಲಿ....

ಕಳ್ಳ ಸಾಗಣೆ ಆರೋಪ: ಏರ್ ಇಂಡಿಯಾ ಸಿಬ್ಬಂದಿಗಳ ಶೋಧ
Published On :

ನವದೆಹಲಿ: ಬರೋಬ್ಬರಿ 78 ಲಕ್ಷ ಚಿನ್ನ ಕಳ್ಳ ಸಾಗಣೆ ಆರೋಪದ ಮೇಲೆ ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸಿಬ್ಬಂದಿಗಳನ್ನು ತೀವ್ರ  ತಪಾಸಣೆಗೊಳಪಡಿಸಲಾಗಿದೆ.

ಮುಂಬೈನಿಂದ ಅಹಮದಾಬಾದ್‌ಗೆ ಹೋಗುತ್ತಿರುವ ಎಐ-012 ಸಂಖ್ಯೆಯ ಏರ್ ಇಂಡಿಯಾ ವಿಮಾನದಲ್ಲಿ ಅಲ್ಲಿನ ಸಿಬ್ಬಂದಿಗಳಾದ ನಿಹಾಲ್ ಪ್ರಜಾಪತಿ ಹಾಗೂ ಸಿದ್ದೇಶ್ ಪಾಟೀಲ್ ಎಂಬುವರು ವಿಮಾನದಲ್ಲಿ 3 ಕೆಜಿ ಚಿನ್ನವನ್ನು ಕಳ್ಳ ಸಾಗಣೆ ಮಾಡುದ್ದಾರೆ ಎಂದು ಆರೋಪಿಸಿ ಪ್ರಯಾಣಿಕರೊಬ್ಬರು ಫೆ. 10ರಂದು  ಏರ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕರಿಗೆ ಪತ್ರ ಬರೆದಿದ್ದರು.

ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ನಿರ್ದೇಶಕರು ವಿಷಯವನ್ನು ಏರ್ ಇಂಡಿಯಾದ ಗುಪ್ತಚರ ಇಲಾಖೆಯ ಆಯುಕ್ತರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದ ಆಯುಕ್ತರು ಚತ್ರಪತಿ ಶಿವಾಜಿ ಟರ್ಮಿನಲ್ 2 ವಿಮಾನದಲ್ಲಿನ ಯಾರೊಬ್ಬ ಸಿಬ್ಬಂದಿಯನ್ನು ಬಿಡದೆ ಎಲ್ಲರನ್ನು ತಪಾಸಣೆಗೊಳಪಡಿಬೇಕೆಂದು ಸೂಚನೆ ನೀಡಿದ್ದಾರೆ. ಅಲ್ಲದೇ ಒಂದು ವೇಳೆ ಆರೋಪ ನಿಜವಾಗಿ, ಯಾರಾದರೂ ಸಿಕ್ಕಿ ಹಾಕಿಕೊಂಡರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.