ಸ್ಮೃತಿ ಇರಾನಿ ಮೋದಿ 2ನೇ ಪತ್ನಿ, ವಿವಾದಾತ್ಮಕ ಹೇಳಿಕೆ ಖಂಡಿಸಿದ ಅಸ್ಸಾಂ ಸಿಎಂ
ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಪತ್ನಿ ಎಂದಿದ್ದ ಕಾಂಗ್ರೆಸ್ ಶಾಸಕ ನೀಲಮಣಿ ಸೆಂಡೆಕಾ...

Published On :
ಗುವಾಹತಿ: ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಪತ್ನಿ ಎಂದಿದ್ದ ಕಾಂಗ್ರೆಸ್ ಶಾಸಕ ನೀಲಮಣಿ ಸೆಂಡೆಕಾ ಅವರ ವಿವಾದಾತ್ಮಕ ಹೇಳಿಕೆಯನ್ನು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯಿ ಅವರು ಸೋಮವಾರ ಖಂಡಿಸಿದ್ದಾರೆ. ಅಲ್ಲದೆ ಅದು 'ಅಸ್ಸಾಮಿ ಸಂಸ್ಕೃತಿ ಅಲ್ಲ' ಎಂದಿದ್ದಾರೆ.
'ನೀಲಮಣಿ ಸಂಡೇಕಾ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅವರು ತಪ್ಪು ಮಾಡಿದ್ದಾರೆ. ಹೀಗಾಗಿ ಕ್ಷಮೆ ಕೇಳುವಂತೆ ಸೂಚಿಸಿದ್ದೇನೆ. ಆದರೆ ಈಗಾಗಲೇ ಕ್ಷಮೆ ಕೇಳಿರುವುದಾಗಿ ಅವರು ಹೇಳಿದ್ದಾರೆ' ಎಂದು ಅಸ್ಸಾಂ ಸಿಎಂ ವರದಿಗಾರರಿಗೆ ತಿಳಿಸಿದರು.
'ಹಿಮಂತ್ ಬಿಸ್ವಾ ಶರ್ಮಾ(ಈಗ ಬಿಜೆಪಿಯಲ್ಲಿರುವ ಮಾಜಿ ಕಾಂಗ್ರೆಸ್ ನಾಯಕ) ಅವರು ಹಿಂದೆ ಇಂತಹದ್ದೇ ಹೇಳಿಕೆ ನೀಡಿದ್ದರು. ಅವರಿಗೂ ನಾನು ಕ್ಷಮೆ ಕೋರುವಂತೆ ಸೂಚಿಸಿದ್ದೇ. ಬಿಜೆಪಿ ಅಥವಾ ನಮ್ಮ ಪಕ್ಷ ಯಾವುದೇ ಪಕ್ಷದವರೂ ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಮತ್ತು ಇದು ಅಸ್ಸಾಮಿ ಸಂಸ್ಕೃತಿ ಅಲ್ಲ' ಎಂದು ಗೊಗೊಯ್ ಹೇಳಿದ್ದಾರೆ.
ನಿನ್ನೆ ನಲ್ಬರಿಯ ಕಾರ್ಯಕ್ರಮವೊಂದರಲ್ಲಿ ಸೆಂಡೆಕಾ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸೆಂಡೆಕಾ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


