ದೇಶ

ಅನುಪಮ್ ಖೇರ್ ಗೆ ಕಾಶ್ಮೀರದ ಇತಿಹಾಸ ಗೊತ್ತಿಲ್ಲ: ಜೆಡಿಯು

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ, ನೀಡಿರುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವುದರ ಪರವಾಗಿ ಹೇಳಿಕೆ ನೀಡಿದ್ದ ಅನುಪಮ್ ಖೇರ್ ಅವರ ವಿರುದ್ಧ ಜೆಡಿಯು ವಾಗ್ದಾಳಿ ನಡೆಸಿದೆ.

ಅನುಪಮ್ ಖೇರ್ ಗೆ  ಕಾಶ್ಮೀರದ ಇತಿಹಾಸ ಗೊತ್ತಿಲ್ಲ: ಜೆಡಿಯು
ಅನುಪಮ್ ಖೇರ್
Published On :

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ, ಅಧಿಕಾರಗಳನ್ನು ನೀಡಿರುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವುದರ ಪರವಾಗಿ ಹೇಳಿಕೆ ನೀಡಿದ್ದ ಬಾಲಿವುಡ್ ನಟ ಅನುಪಮ್ ಖೇರ್ ಅವರ ವಿರುದ್ಧ ಜೆಡಿಯು ವಾಗ್ದಾಳಿ ನಡೆಸಿದೆ.
ಬಿಜೆಪಿಯ ಹೊಸ ವಕ್ತಾರ ಅನುಪಮ್ ಖೇರ್ ಅವರಿಗೆ ಕಾಶ್ಮೀರದ ಇತಿಹಾಸ ಗೊತ್ತಿಲ್ಲ 370 ನೇ ವಿಧಿ ಪ್ರಕಾರ  ಜಮ್ಮು-ಕಾಶ್ಮೀರಕ್ಕೆ ವಿಶೇಶ ಅಧಿಕಾರ ನಿಡಿದಾಗ ಅನುಪಮ್ ಖೇರ್ ಇನ್ನೂ ಬಾಲಕನಾಗಿದ್ದರು ಎಂದು ಎಂದು ಜೆಡಿಯು ಮುಖಂಡ ಕೆಸಿ ತ್ಯಾಗಿ ಹೇಳಿದ್ದಾರೆ.
ಕಾಶ್ಮೀರದ ಸಮಸ್ಯೆ ಬಗೆಹರಿಯಬೇಕಾದರೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಬೇಕು ಎಂದು ಅನುಪಮ್ ಖೇರ್ ಅಭಿಪ್ರಾಯಪಟ್ಟಿದರು. ಜಮ್ಮುವಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಅನುಪಮ್ ಖೇರ್, ಕಾಶ್ಮೀರದಲ್ಲಿ ದೇಶದ ಇತರ ರಾಜ್ಯಗಳ ಜನರೂ ಭೂಮಿ ಖರೀದಿಸುವಂತಾದರೆ ಮಾತ್ರ ಅಲ್ಲಿನ  ಸಮಸ್ಯೆ ಬಗೆಹರಿಯಲಿದೆ ಎಂದು ಅನುಪಮ್ ಖೇರ್ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.