ದೇಶ

ಅಹಂಕಾರ ಬದಿಗಿರಿಸಿ ದೇಶದ ಅಭಿವೃದ್ಧಿಗೆ ಶ್ರಮಿಸಿ: ರಾಜಕೀಯ ಪಕ್ಷಗಳಿಗೆ ನ್ಯಾ.ಅರ್ಜನ್ ಸಿಕ್ರಿ ಕರೆ

ದೇಶದ ಅಭಿವೃದ್ಧಿಗಾಗಿ ರಾಜಕೀಯ ಪಕ್ಷಗಳು ಅಹಂಕಾರವನ್ನು ಬದಿಗಿರಿಸಬೇಕು ಎಂದು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಅರ್ಜನ್ ಕುಮಾರ್ ಸಿಕ್ರಿ ಕರೆ ನೀಡಿದ್ದಾರೆ.

ಅಹಂಕಾರ ಬದಿಗಿರಿಸಿ ದೇಶದ ಅಭಿವೃದ್ಧಿಗೆ ಶ್ರಮಿಸಿ: ರಾಜಕೀಯ ಪಕ್ಷಗಳಿಗೆ ನ್ಯಾ.ಅರ್ಜನ್ ಸಿಕ್ರಿ ಕರೆ
ನ್ಯಾ. ಅರ್ಜನ್ ಕುಮಾರ್ ಸಿಕ್ರಿ (ಸಂಗ್ರಹ ಚಿತ್ರ)
Published On :

ನವದೆಹಲಿ: ದೇಶದ ಅಭಿವೃದ್ಧಿಗಾಗಿ ರಾಜಕೀಯ ಪಕ್ಷಗಳು ಅಹಂಕಾರವನ್ನು ಬದಿಗಿರಿಸಬೇಕು ಎಂದು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಅರ್ಜನ್ ಕುಮಾರ್ ಸಿಕ್ರಿ ಕರೆ ನೀಡಿದ್ದಾರೆ.
ಎಲ್ಲಾ ರಾಜಕೀಯ ಪಕ್ಷಗಳು ಅಭಿವೃದ್ಧಿ ಪ್ರಧಾನ ರಾಜಕಾರಣ ಮಾಡಬೇಕಿದೆ. ಆದ್ದರಿಂದ ಅಹಂಕಾರ, ಸ್ವಾರ್ಥಗಳನ್ನು ಬಿಟ್ಟು ಒಗ್ಗಟ್ಟಿನಿಂದ ಅಭಿವೃದ್ಧಿಯೆಡೆಗೆ ಕೆಲಸ ಮಾಡಬೇಕಿದೆ, ಈ ನಿಟ್ಟಿನಲ್ಲಿ ಕೆಲಸ ಮಾಡಲು ಕೌಶಲ್ಯತೆ ಮುಖ್ಯವಾಗುತ್ತದೆ ಎಂದು ಅರ್ಜನ್ ಸಿಕ್ರಿ ಅಭಿಪ್ರಾಯಪಟ್ಟಿದ್ದಾರೆ. ಜಿ ಎಸ್ ಟಿ ಮಸೂದೆಗಳಂತಹ ಮಸೂದೆಗಳನ್ನು ಸಂಸತ್ ನಲ್ಲಿ ಅಂಗೀಕರಿಸಲು ಎಲ್ಲಾ ರಾಜಕೀಯ ಪಕ್ಷಗಳನ್ನು ಮನವೊಲಿಸಬೇಕಿದ್ದು, ಅಹಂಕಾರ ಬಿದಿಗಿಟ್ಟು ರಾಜಕೀಯ ಪಕ್ಷಗಳೂ ದೇಶದ ಅಭಿವೃದ್ಧಿಗೆ ಸಹಕರಿಸಬೇಕಿದೆ ಎಂದಿದ್ದಾರೆ.
ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅರ್ಜನ್ ಸಿಕ್ರಿ, ಮಾತುಕತೆ ಮೂಲಕ ಎರಡು ದೇಶಗಳ ನಡುವಿನ ಸಮಸ್ಯೆಗಳೇ ಬಗೆಹರಿಯಬಹುದಾದರೆ ಎರಡು ರಾಜಕೀಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಏಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದ್ದಾರೆ.
ದೇಶದ ಅಭಿವೃದ್ಧಿಗಾಗಿ ರಾಜಕೀಯ ಪಕ್ಷಗಳು ಕನಿಷ್ಠ ಸಾಮಾನ್ಯ ಯೋಜನೆ ಚೌಕಟ್ಟನ್ನು ವಿಧಿಸಿಕೊಂಡು ಅದರ ಅಡಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ, ಇಂತಹ ನಿರ್ಧಾರಗಳು ಜಿಎಸ್ ಟಿ ಮಸೂದೆ ಅಂಗೀಕಾರಕ್ಕೂ ಅತ್ಯಗತ್ಯವಾಗಿದೆ ಎಂದು ಸಿಕ್ರಿ ಅಭಿಪ್ರಾಯಪಟ್ಟಿದ್ದಾರೆ. ಸಂಸತ್ ಅಧಿವೇಶನದಲ್ಲಿ ವಿರೋಧಪಕ್ಷದ ಸದಸ್ಯರಿಂದ ನಿರಂತರ ಗದ್ದಲದಿಂದಾಗಿ ಕಲಾಪ ವ್ಯರ್ಥವಾಗುತ್ತಿದ್ದು, ಜಿಎಸ್ ಟಿ ಮಸೂದೆ ಸೇರಿದಂತೆ ಹಲವು ಮಸೂದೆಗಳು ಅಂಗೀಕಾರವಾಗದೇ ಹಾಗೆಯೇ ಉಳಿದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.