ನಾನು ಸಚಿನ್ ತೆಂಡೂಲ್ಕರ್ ಅಭಿಮಾನಿ: ಸುಂದರ್ ಪಿಚೈ
ಬಾಲ್ಯದಲ್ಲಿ ನನಗೂ ಒಬ್ಬ ಕ್ರಿಕೆಟರ್ ಆಗಬೇಕೆಂಬ ಆಸೆಯಿತ್ತು ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. ಮೊದಲಿಗೆ ಸುನೀಲ್ ಗವಾಸ್ಕರ್ ಆಮೇಲೆ ನಾನು ಸಚಿನ್ ...

Published On :
ನವದೆಹಲಿ: ಬಾಲ್ಯದಲ್ಲಿ ನನಗೂ ಒಬ್ಬ ಕ್ರಿಕೆಟರ್ ಆಗಬೇಕೆಂಬ ಆಸೆಯಿತ್ತು ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. ಮೊದಲಿಗೆ ಸುನೀಲ್ ಗವಾಸ್ಕರ್ ಆಮೇಲೆ ನಾನು ಸಚಿನ್ ತೆಂಡೂಲ್ಕರ್‌ನ್ನು ಅತಿಯಾಗಿ ಇಷ್ಟ ಪಡತೊಡಗಿದೆ ಎಂದು ಪಿಚೈ ಹೇಳಿದ್ದಾರೆ. ದೆಹಲಿಯ ಶ್ರೀರಾಂ ಕಾಲೇಜ್ ಆಫ್ ಕಾಮರ್ಸ್ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.
ಟೆಸ್ಟ್ ಪಂದ್ಯ ಮತ್ತು ಏಕದಿನ ಪಂದ್ಯವನ್ನು ಒಂದೇ ರೀತಿಯಲ್ಲಿ ಆಸ್ವಾದಿಸುತ್ತೇನೆ. ಆದರೆ ಚುಟುಕು ಕ್ರಿಕೆಟ್ ಟ್ವೆಂಟಿ-20ಯಲ್ಲಿ ನನಗಷ್ಟು ಆಸಕ್ತಿಯಿಲ್ಲ. ಟೆಸ್ಟ್ ಕ್ರಿಕೆಟ್ ತುಂಬಾ ಚೆನ್ನಾಗುರುತ್ತದೆ. ಅದನ್ನು ನೋಡುವುದಕ್ಕಾಗಿ ನಾನು ಬಿಡುವು ಮಾಡಿಕೊಳ್ಳುತ್ತೇನೆ. ಟ್ವೆಂಟಿ -20 ನೋಡಿ ಬೆಳೆದವನಲ್ಲ ನಾನು. ಆದ್ದರಿಂದ ಅದನ್ನು ಆಸ್ವಾದಿಸುವುದು ನನ್ನಿಂದ ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕ್ರಿಕೆಟ್ ಮಾತ್ರವಲ್ಲದೆ ಫುಟ್‌ಬಾಲ್ ಕೂಡಾ ನನಗಿಷ್ಟ. ಮೆಸ್ಸಿ ಮತ್ತು ಬಾರ್ಸಿಲೋನಾ ತಂಡದ ಅಭಿಮಾನಿ ನಾನು. ಮಧ್ಯರಾತ್ರಿ ನಿದ್ದೆ ಮಾಡದೆ ಕುಳಿತು ಫುಟ್ಬಾಲ್ ನೋಡುತ್ತಿದ್ದೆ ಎಂದು ಪಿಚೈ ತಮ್ಮ ಕ್ರೀಡಾ ಆಸಕ್ತಿ ಬಗ್ಗೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Sachin Tendulkarಸಚಿನ್ ತೆಂಡೂಲ್ಕರ್Googleಸುನೀಲ್ ಗವಾಸ್ಕರ್Sunil GavaskarSundar Pichaiಸುಂದರ್ ಪಿಚೈ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


