ತುಂಬಿ ತುಳುಕುತ್ತಿರುವ ಜೈಲುಗಳು
ದೇಶದ ವಿವಿಧ ಜೈಲುಗಳು ಹೊಂದಬಹುದಾದ ಕೈದಿಗಳ ಸಂಖ್ಯೆ 3,56,361 ಆಗಿದ್ದರೆ, ಸದ್ಯ ಅವು ಹೊಂದಿರುವ ಕೈದಿಗಳ ಸಂಖ್ಯೆ 4,18,536 ಎಂದು ರಾಜ್ಯಸಭೆಗೆ ತಿಳಿಸಲಾಯಿತು...

ನವದೆಹಲಿ: ದೇಶದ ವಿವಿಧ ಜೈಲುಗಳು ಹೊಂದಬಹುದಾದ ಕೈದಿಗಳ ಸಂಖ್ಯೆ 3,56,361 ಆಗಿದ್ದರೆ, ಸದ್ಯ ಅವು ಹೊಂದಿರುವ ಕೈದಿಗಳ ಸಂಖ್ಯೆ 4,18,536 ಎಂದು ರಾಜ್ಯಸಭೆಗೆ ತಿಳಿಸಲಾಯಿತು.
ಶಿವಸೇನೆ ಸಂಸದ ಅನಿಲ್ ದೇಸಾಯಿ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ರಾಜ್ಯ ಸಚಿವ ಹರಿಭಾಯ್ ಚೌಧರಿ, ದೆಹಲಿ ಜೈಲುಗಳಲ್ಲೇ 14,316 ಕೈದಿಗಳಿದ್ದಾರೆ. ಆದರೆ, ಅನುಮತಿತ ಸಾಮಥ್ರ್ಯ ಕೇವಲ 6,250 ಮಾತ್ರ ಎಂದಿದ್ದಾರೆ. ತಿಹಾರ್ ಜೈಲಿನಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಕೃತ್ಯಗಳ ಹಿನ್ನೆಲೆಯಲ್ಲಿ, ಜೈಲುಗಳಿರುವುದು ಕೈದಿಗಳನ್ನು ಸುಧಾರಿಸಲಿಕ್ಕೋ ಅಥವಾ ಹಾಳು ಮಾಡುವುದಕ್ಕೋ ಎಂಬ ಟೀಕೆಗಳ ಹಿನ್ನೆಲೆಯಲ್ಲಿ ಕೈದಿಗಳ ವ್ಯಕ್ತಿತ್ವ ಸುಧಾರಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


