ದೇಶ

2011ರ ಜನಗಣತಿ: ಹಿಂದು ಜನಸಂಖ್ಯೆಯಲ್ಲಿ ಇಳಿಕೆ: ಮುಸ್ಲಿಂ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳ

ಎನ್‌ಡಿಎ ಸರ್ಕಾರ ಬಿಡುಗಡೆ ಮಾಡಿರುವ 2011ರ ಜನಗಣತಿಯಲ್ಲಿ ದೇಶದಲ್ಲಿನ ಹಿಂದು ಜನಸಂಖ್ಯೆ ಶೇ.0.7ರಷ್ಟು ಕಡಿಮೆಯಾಗಿದ್ದು, ಮುಸ್ಲಿಂ ಜನಸಂಖ್ಯೆ ಶೇ.0.8ರಷ್ಟು...

2011ರ ಜನಗಣತಿ: ಹಿಂದು ಜನಸಂಖ್ಯೆಯಲ್ಲಿ ಇಳಿಕೆ: ಮುಸ್ಲಿಂ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳ
ಮುಸ್ಲಿಂ ಸಮುದಾಯ
Published On :
ನವದೆಹಲಿ: ಎನ್‌ಡಿಎ ಸರ್ಕಾರ ಬಿಡುಗಡೆ ಮಾಡಿರುವ 2011ರ ಜನಗಣತಿಯಲ್ಲಿ ದೇಶದಲ್ಲಿನ ಹಿಂದು ಜನಸಂಖ್ಯೆ ಶೇ.0.7ರಷ್ಟು ಕಡಿಮೆಯಾಗಿದ್ದು, ಮುಸ್ಲಿಂ ಜನಸಂಖ್ಯೆ ಶೇ.0.8ರಷ್ಟು ಹೆಚ್ಚಿರುವುದು ಬಹಿರಂಗಗೊಂಡಿದೆ. 
2001- 2011ರ ಧಾರ್ಮಿಕ ಸಮುದಾಯಗಳ ಜನಗಣತಿಯ ಅಂಕಿ - ಅಂಶಗಳಿಂದ, ದೇಶದ ಒಟ್ಟು ಜನಸಂಖ್ಯೆಯು ಶೇ.17.7ರಷ್ಟು ಏರಿದ್ದು, ದೇಶದಲ್ಲಿನ ಇತರೆಲ್ಲ ಧಾರ್ಮಿಕ ಸಮುದಾಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಂ ಜನಸಂಖ್ಯಾ ವೃದ್ಧಿದರ ಹೆಚ್ಚಿದೆ. 
ದೇಶದ ಒಟ್ಟು ಜನಸಂಖ್ಯೆಯು 2011ರಲ್ಲಿ 121.09 ಕೋಟಿ ಇರುವುದು ಅಂಕಿ-ಅಂಶಗಳಲ್ಲಿ ದಾಖಲಾಗಿದೆ. ಇದರಲ್ಲಿ ಹಿಂದುಗಳ ಜನಸಂಖ್ಯೆ 96.63 ಕೋಟಿ (79.8%) ಮುಸ್ಲಿಮರು 17.22 ಕೋಟಿ (14.2%), ಕ್ರೈಸ್ತರು 2.78 ಕೋಟಿ (2.3%). ಸಿಕ್ಖರು 2.08 ಕೋಟಿ (1.7%), ಬೌದ್ಧರು 0.84 ಕೋಟಿ (0.7%), ಜೈನರು 0.45 ಕೋಟಿ (0.4%), ಇತರ ಧರ್ಮೀಯರು ಮತ್ತು ಅನುಯಾಯಿಗಳು (ಓಆರ್‌ಪಿ) 0.79 ಕೋಟಿ (.07%) ಮತ್ತು ಧರ್ಮ ಘೋಷಣೆ ಮಾಡದವರು 0.29 ಕೋಟಿ (0.2%).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.