ಶ್ರೀನಗರ: ತ್ರಿವರ್ಣ ಧ್ವಜಕ್ಕೆ ಬೆಂಕಿ; ಪಾಕ್, ಇಸಿಸ್ ಧ್ವಜ ಹಾರಾಟ
ಯುವಕರ ಗುಂಪೊಂದು ತ್ರಿವರ್ಣ ಧ್ವಜವನ್ನು ಸುಟ್ಟು ಪಾಕಿಸ್ಥಾನ ಹಾಗೂ ಉಗ್ರ ಸಂಘಟನೆ ಇಸಿಸ್ ಧ್ವಜವನ್ನು ಹಾರಿಸಿ ದುಷ್ಕೃತ್ಯ ಎಸಗಿದ್ದಾರೆ...

Published On :
ಶ್ರೀನಗರ: ಯುವಕರ ಗುಂಪೊಂದು ತ್ರಿವರ್ಣ ಧ್ವಜವನ್ನು ಸುಟ್ಟು ಪಾಕಿಸ್ಥಾನ ಹಾಗೂ ಉಗ್ರ ಸಂಘಟನೆ ಇಸಿಸ್ ಧ್ವಜವನ್ನು ಹಾರಿಸಿ ದುಷ್ಕೃತ್ಯ ಎಸಗಿದ್ದಾರೆ.
ಶುಕ್ರವಾರದ ಪ್ರಾರ್ಥನೆಯ ಬಳಿಕ ಯುವಕರ ಗುಂಪೊಂದು ನೌಹತ್ತಾ ಎಂಬ್ಲಿನ ಜಾಮಿಯಾ ಮಸೀದಿಯ ಬಳಿ ಇರುವ ಶಾಪಿಂಗ್ ಆರ್ಕೇಡ್‌ನ ಸೂರಿನ ಮೇಲೆ ತ್ರಿವರ್ಣ ಧ್ವಜ ಮತ್ತು ಪಿಡಿಪಿ ಧ್ವಜವನ್ನು ಸುಟ್ಟು ಹಾಕಿದ್ದಾರೆ. ಅಲ್ಲದೆ ಇಸಿಸ್ ಮತ್ತು ಪಾಕ್ ಧ್ವಜವನ್ನು ಹಾರಿಸಿದ್ದು, ಉದ್ರಿಕ್ತ ಪರಿಸ್ಥಿತಿ ತಲೆದೋರುವಂತೆ ಮಾಡಿದರು. ಪರಿಣಾಮವಾಗಿ ಪ್ರತಿಭಟನಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ಉಂಟಾಯಿತು.
ಈ ವೇಳೆ ಕೆಲ ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಆದರೆ ಪೊಲೀಸರು ಕೆಲವು ಅಶ್ರುವಾಯು ಕೋಶಗಳನ್ನು ಸಿಡಿಸಿ ಪ್ರತಿಭಟಕಾರರನ್ನು ಚದುರಿಸುವಲ್ಲಿ ಸಫಲರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


