ದೇಶ

ರೈಲ್ವೆ ಹಳಿ ಸ್ಫೋಟಕ್ಕೆ ಯತ್ನ ವಿಫಲ: ಮಾವೋವಾದಿ ಹತ್ಯೆ

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅಸ್ಸಾಂ ರಾಜ್ಯದಲ್ಲಿ ಶುಕ್ರವಾರ ಕಾಂತಪುರ್ ಲಿಬರೇಷನ್ ಸಂಫಟನೆಯ ಉಗ್ರಗಾಮಿಗಳು ರೈಲ್ವೆ ಹಳಿಯನ್ನು ಸ್ಪೋಟಿಸಲೆತ್ನಿಸಿದ...

ರೈಲ್ವೆ ಹಳಿ ಸ್ಫೋಟಕ್ಕೆ ಯತ್ನ ವಿಫಲ: ಮಾವೋವಾದಿ  ಹತ್ಯೆ
ಹಳಿ ತಪ್ಪಿದ ರೈಲ್ವೆ ಟ್ರ್ಯಾಕ್(ಸಂಗ್ರಹ ಚಿತ್ರ)
Published On :

ಗುವಾಹಟಿ: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅಸ್ಸಾಂ ರಾಜ್ಯದಲ್ಲಿ ಶುಕ್ರವಾರ ಕಾಂತಪುರ್ ಲಿಬರೇಷನ್ ಸಂಫಟನೆಯ ಉಗ್ರಗಾಮಿಗಳು ರೈಲ್ವೆ ಹಳಿಯನ್ನು ಸ್ಪೋಟಿಸಲೆತ್ನಿಸಿದ ಪ್ರಯತ್ನವನ್ನು ಸೇನಾಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಿಂದಾಗಿ ವಿಫಲಗೊಂಡಿದೆ.

ಕೋಕ್ರಜಾರ್ ಮತ್ತು ಗುವಾಹಟಿ ರೈಲ್ವೆ ನಿಲ್ದಾಣ ಸಮೀಪ ರೈಲ್ವೆ ಹಳಿ ಮೇಲೆ ಇಟ್ಟಿದ್ದ ಸ್ಪೋಟಕಗಳನ್ನು ವಶಪಡಿಸಿಕೊಂಡು ಓರ್ವ ಉಗ್ರಗಾಮಿಯನ್ನು ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಎಲ್.ಆರ್.ಬಿಶ್ನೋಯಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ರಾತ್ರಿ ಸುಮಾರು 11.45ರ ಹೊತ್ತಿಗೆ ಪೊಲೀಸರು ಮತ್ತು ಉಗ್ರಗಾಮಿಗಳ ನಡುವೆ ದಾಳಿ ನಡೆಯಿತು.ಇದರಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ತಪ್ಪಿಸಿಕೊಂಡಿದ್ದಾನೆ.
ಸ್ಥಳದಿಂದ 7 ಕೆ.ಜಿ ತೂಕದ ಸ್ಪೋಟಕ, ಪಿಸ್ತೂಲ್, ಮದ್ದುಗುಂಡುಗಳು, ಗ್ರೆನೇಡ್, ಮೊಬೈಲ್ ಸಿಮ್ ಮತ್ತು ಒಂದು ಕೈ ಚೀಲವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಮತ್ತೊಂದೆಡೆ ನಗೌನ್ ಜಿಲ್ಲೆಯಲ್ಲಿ ಪೊಲೀಸರು ಮನೆಯೊಂದರಿಂದ ಮೂರು ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ನಾಜಿಮುದ್ದೀನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.