ದೇಶ

ಸ್ವಚ್ಚ ಭಾರತ ರ್ಯಾಂಕಿಂಗ್: ಮೈಸೂರು ಟಾಪ್ ಸಿಟಿ; ಬೆಂಗಳೂರು ನಂಬರ್ 1 ರಾಜಧಾನಿ

ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ನಡೆಸಿದ ಸರ್ವೆಯಲ್ಲಿ ದೇಶದ 476 ನಗರಗಳಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರು ಮೊದಲ ರ್ಯಾಂಕಿಂಗ್ ಪಡೆದಿದೆ...

ಸ್ವಚ್ಚ ಭಾರತ ರ್ಯಾಂಕಿಂಗ್: ಮೈಸೂರು ಟಾಪ್ ಸಿಟಿ; ಬೆಂಗಳೂರು ನಂಬರ್ 1 ರಾಜಧಾನಿ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ನಡೆಸಿದ ಸರ್ವೆಯಲ್ಲಿ ದೇಶದ 476 ನಗರಗಳಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರು ಮೊದಲ ರ್ಯಾಂಕಿಂಗ್ ಪಡೆದಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರು ನಂಬರ್ 1 ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಮೊದಲ 10 ನಗರಗಳಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ ಸಿಕ್ಕಿದೆ. ನಂತರದ 25 ನಗರಗಳಲ್ಲಿ ಪಶ್ಚಿಮ ಬಂಗಾಳ ಕೂಡ ಸ್ಥಾನ ಪಡೆದಿದೆ. ನಗರಗಳಲ್ಲಿನ ತ್ಯಾಜ್ಯ ನಿರ್ವಹಣೆಯ ಆಧಾರದ ಮೇಲೆ ಈ ಬೆಂಗಳೂರು ಹಾಗೂ ಮೈಸೂರು ನಗರಗಳಿಗೆ ಈ ಶ್ರೇಯಾಂಕ ನೀಡಲಾಗಿದೆ.

ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದ ನಗರಗಳು ಸ್ವಚ್ಛ ಭಾರತ ರ್ಯಾಂಕಿಂಗ್ ನಲ್ಲಿ ಹೆಚ್ಚಿನ ಸ್ಥಾನ ಪಡೆದಿವೆ. ಅಂದರೆ ಮೊದಲ ನೂರು ನಗರಗಳಲ್ಲಿ ದಕ್ಷಿಣ ಭಾರತದ 39 ನಗರಗಳಿವೆ. ಪೂರ್ವ ರಾಜ್ಯಗಳ 27 ನಗರಗಳು, ಪಶ್ಮಿಮ ರಾಜ್ಯಗಳಲ್ಲಿ 15 ನಗರಗಳು, ಉತ್ತರ ಭಾರತದ ರಾಜ್ಯಗಳ 12 ನಗರಗಳು ಸ್ಥಾನ ಪಡೆದಿವೆ. ಕೇವಲ 15 ರಾಜಧಾನಿಗಳು ಮಾತ್ರ ಸ್ವಚ್ಛ ಭಾರತ್ ರ್ಯಾಂಕಿಂಗ್ ನಲ್ಲಿ ಸ್ಥಾನ ಪಡೆದಿವೆ. ಬಿಹಾರದ ರಾಜಧಾನಿ ಪಾಟ್ನಾ 429 ನೇ ಸ್ಥಾನದಲ್ಲಿದೆ.

ಉತ್ತಮ ನಗರಗಳೆಂದು ರ್ಯಾಂಕಿಂಗ್ ಪಡೆದ ಮೊದಲ 10 ನಗರಗಳು, ಮೈಸೂರು, ತಿರುಚಿರಾಪಳ್ಳಿ, ನವಿಮುಂಬಯಿ, ಕೊಚ್ಚಿ,  ಹಾಸನ, ಮಂಡ್ಯ, ಬೆಂಗಳೂರು,  ತಿರುವನಂತಪುರ, ಹಳಿಸಹರ, ಮತ್ತು ಗಂಗ್ ಟೋಕ್ ನಗರಗಳಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.