ಗಡಾಫಿ- ಐಎಸ್ ಉಗ್ರರ ಜಟಾಪಟಿಯಿಂದ ಇಬ್ಬರು ಭಾರತೀಯರ ಬಿಡುಗಡೆ ವಿಳಂಬ
ಮುವಮ್ಮರ್ ಗಡಾಫಿ ಬಣ ಹಾಗೂ ಇಸ್ಲಾಮಿಕ್ ಸ್ಟೇಟ್ ನ ಬಣದ ನಡುವೆ ನಡೆಯುತ್ತಿರುವ ಕಾಳಗದಿಂದಾಗಿ ಇಸೀಸ್ ಉಗ್ರರ ವಶದಲ್ಲಿರುವ ಭಾರತೀಯರ ಬಿಡುಗಡೆ ವಿಳಂಬವಾಗುತ್ತಿದೆ.

ನವದೆಹಲಿ: ಲಿಬಿಯಾದ ಸರ್ವಾಧಿಕಾರಿ ಮುವಮ್ಮರ್ ಗಡಾಫಿ ಬಣ ಹಾಗೂ ಇಸ್ಲಾಮಿಕ್ ಸ್ಟೇಟ್ ನ ಬಣದ ನಡುವೆ ನಡೆಯುತ್ತಿರುವ ಕಾಳಗದಿಂದಾಗಿ ಇಸೀಸ್ ಉಗ್ರರ ವಶದಲ್ಲಿರುವ ಭಾರತೀಯರ ಬಿಡುಗಡೆ ವಿಳಂಬವಾಗುತ್ತಿದೆ.
ಇಸೀಸ್ ವಶದಲ್ಲಿದ್ದ ಭಾರತದ ಇನ್ನಿಬ್ಬರು ನಾಗರಿಕರು ಆ.4 ರಂದು ಭಾರತಕ್ಕೆ ವಾಪಸ್ ಮರಳಿದ್ದಾರೆ. ಇಸೀಸ್ ವಶದಲ್ಲೇ ಇರುವ ಇನ್ನಿಬ್ಬರು ಭಾರತೀಯರ ಕುಟುಂಬದವರಿಗೆ ಬಿಡುಗದೆಗೊಂಡಿರುವ ಭಾರತೀಯರು ಧೈರ್ಯ ತುಂಬಿದ್ದು, ಅವರೂ ಶೀಘ್ರವೇ ಬಿಡುಗಡೆಯಾಗಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.
ಗಡಾಫಿ ಪುತ್ರ ಸೈಫ್-ಅಲ್- ಗಡಾಫಿಗೆ ಮರಣ ದಂಡನೆ ವಿಧಿಸಿದ ನಂತರ ಇಸೀಸ್ ಉಗ್ರ ಸಂಘಟನೆ ಹಾಗೂ ಗಡಾಫಿ ಬಣದ ನಡುವೆ ಕಿತ್ತಾಟ ಆರಂಭವಾಗಿದ್ದು ಕಳೆದ ಎರಡು ದಿನಗಳಿಂದ ತೀವ್ರ ಸ್ವರೂಪ ಪಡೆದುಕೊಂಡಿದ್ದು ಕಮಾಂಡರ್ ಗಳ ಆದ್ಯತೆ ಬದಲಾಗಿವೆ. ಈ ಹಿನ್ನೆಲೆಯಲ್ಲಿ ಉಳಿದ ಇಬ್ಬರು ಭಾರತೀಯರ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ. ಇನ್ನಿಬ್ಬರನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಇಸೀಸ್ ಉಗ್ರರು ಹೇಳಿದ್ದರು ಎಂದು ಅಪಹರಣಕ್ಕೊಳಗಾಗಿದ್ದ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


