ಮಗಳ ಮುಖ ನೋಡುತ್ತೇನೋ, ಇಲ್ಲವೋ ಎಂದು ನೊಂದಿದ್ದೆ!
``ನನಗೆ 5 ತಿಂಗಳ ಹೆಣ್ಣು ಮಗುವಿದೆ. ನಾನಿನ್ನೂ ಅವಳ ಮುಖ ನೋಡಿಲ್ಲ. ನನಗೆ ನನ್ನ ಮಗಳನ್ನು ನೋಡುವ ಭಾಗ್ಯವೇ ಇಲ್ಲ ಎಂದು ಭಾವಿಸಿದ್ದೆ''. ಇದು ಐಎಸ್ ಐಎಸ್ ಉಗ್ರರಿಂದ ಅಪಹರಿಸಲ್ಪಟ್ಟು ಶುಕ್ರವಾರ ಸಂಜೆ ಬಿಡುಗಡೆ ಯಾದ ರಾಯಚೂರಿನ...

ನವದೆಹಲಿ: ``ನನಗೆ 5 ತಿಂಗಳ ಹೆಣ್ಣು ಮಗುವಿದೆ. ನಾನಿನ್ನೂ ಅವಳ ಮುಖ ನೋಡಿಲ್ಲ. ನನಗೆ ನನ್ನ ಮಗಳನ್ನು ನೋಡುವ ಭಾಗ್ಯವೇ ಇಲ್ಲ ಎಂದು ಭಾವಿಸಿದ್ದೆ''. ಇದು ಐಎಸ್ ಐಎಸ್ ಉಗ್ರರಿಂದ ಅಪಹರಿಸಲ್ಪಟ್ಟು ಶುಕ್ರವಾರ ಸಂಜೆ ಬಿಡುಗಡೆ ಯಾದ ರಾಯಚೂರಿನ ಲಕ್ಷ್ಮೀಕಾಂತ್ ಅವರ ಮನದಾಳದ ಮಾತು.
ಶನಿವಾರ ಲಕ್ಷ್ಮೀಕಾಂತ್ ಹಾಗೂ ಕೋಲಾರದ ವಿಜಯ್ ಕುಮಾರ್ ಟ್ರಿ ಪೋಲಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಲುಪಿದ್ದು, ಶೀಘ್ರದಲ್ಲೇ ಭಾರತಕ್ಕೆ ಮರಳುವುದಾಗಿ ತಿಳಿಸಿದ್ದಾರೆ. ``ನಮ್ಮಲ್ಲಿ ಟ್ರಿಪೋಲಿಯಿಂದ ತೆರಳಲು ಟಿಕೆಟ್ ಇಲ್ಲ. ರಾಯಭಾರ ಕಚೇರಿ ಟಿಕೆಟ್‍ಗಾಗಿ ಏನು ವ್ಯವಸ್ಥೆ ಮಾಡಲಿದೆ ಎಂಬ ಮಾಹಿತಿಯಿಲ್ಲ. ಭಾನುವಾರ ಕೌನ್ಸಿಲರ್ ನಮ್ಮನ್ನು ಭೇಟಿಯಾಗಲಿದ್ದು, ನಂತರ ಸ್ವದೇ ಶಕ್ಕೆ ಮರಳುತ್ತೇವೆ'' ಎಂದು ಲಕ್ಷ್ಮೀಕಾಂತ್ ಹೇಳಿದ್ದಾರೆ. ಇದೇ ವೇಳೆ, ನಾನಿನ್ನು ಲಿಬಿಯಾಗೆ ವಾಪಸ್ ಹೋಗಲ್ಲ ಎಂದು ಸ್ಪಷ್ಟಪಡಿಸಿರುವ
ವಿಜಯ್ ಕುಮಾರ್, ``ಈಗಾಗಲೇ ನನ್ನ ಹುದ್ದೆಗೆ ರಾಜಿನಾಮೆ ನೀಡಿದ್ದೇನೆ. ರಾಜಿನಾಮೆ ನೀಡದಂತೆ ವಿಶ್ವವಿದ್ಯಾಲಯವು ಬಹಳಷ್ಟು ಕೋರಿಕೊಂಡಿತ್ತು ಮತ್ತು ನಮ್ಮನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಾಗಿಯೂ ಹೇಳಿತ್ತು. ಆದರೆ ನಾನು ನಿರ್ಧಾರ ಬದಲಿಸಲಿಲ್ಲ'' ಎಂದಿದ್ದಾರೆ. ಏತನ್ಮಧ್ಯೆ, ಕುಮಾರ್ ಪತ್ನಿ ಸುನಿತಾ ಮಾತನಾಡಿ, ನನ್ನ ಪತಿ ವಾಪಸ್ ಬರುತ್ತಾರೆಂಬ ನಂಬಿಕೆಯಿತ್ತು. ಅಪಹರಣದ ಸುದ್ದಿ ಕೇಳಿದಾಗ ಆದ ಭಯ ಮಾತ್ರ ಮಾತಿನಲ್ಲಿ ವಿವರಿಸಲು ಅಸಾಧ್ಯ ಎಂದಿದ್ದಾರೆ. ಈ ನಡುವೆ, ಅಪಹರಣಕ್ಕೀಡಾದ ಮತ್ತಿಬ್ಬರು ಉಪನ್ಯಾಸಕರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


