ದೇಶ

ಮಹಾಭಾರತದಲ್ಲಿ ಯುಧಿಷ್ಟಿರನ ಪಾತ್ರ ಮಾಡಿದ್ದಕ್ಕೆ ಚೌಹಾಣ್ ಗೆ ಚೇರ್‌ಮೆನ್ ಸ್ಥಾನ?

ಬಿ. ಆರ್ ಚೋಪ್ರಾ ಅವರ ಮಹಾಭಾರತ ಟೀವಿ ಧಾರವಾಹಿಯಲ್ಲಿ ಯುಧಿಷ್ಟಿರನಾಗಿ ಅಭಿನಯಿಸಿದ್ದ ಕಾರಣ ಗಜೇಂದ್ರ ಚೌಹಾಣ್...

ಮಹಾಭಾರತದಲ್ಲಿ ಯುಧಿಷ್ಟಿರನ ಪಾತ್ರ ಮಾಡಿದ್ದಕ್ಕೆ ಚೌಹಾಣ್ ಗೆ ಚೇರ್‌ಮೆನ್ ಸ್ಥಾನ?
ಗಜೇಂದ್ರ ಚೌಹಾಣ್ ಯುಧಿಷ್ಟಿರನ ಪಾತ್ರದಲ್ಲಿ
Published On :

ನವದೆಹಲಿ:  ಬಿ. ಆರ್ ಚೋಪ್ರಾ ಅವರ ಮಹಾಭಾರತ ಟೀವಿ ಧಾರವಾಹಿಯಲ್ಲಿ ಯುಧಿಷ್ಟಿರನಾಗಿ ಅಭಿನಯಿಸಿದ್ದ ಕಾರಣ ಗಜೇಂದ್ರ ಚೌಹಾಣ್ ಅವರನ್ನು ಪುಣೆ ಫಿಲ್ಮ್  ಇನ್ಸಿಟ್ಯೂಟ್ ( FTII )ಅಧ್ಯಕ್ಷರನ್ನಾಗಿ ಮಾಡಲಾಯಿತು- ಹೀಗೆಂದು ಉತ್ತರಿಸಿದ್ದು ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯ!

ಗಜೇಂದ್ರ ಚೌಹಾಣ್ ಅವರಿಗೆ ಪ್ರತಿಷ್ಠಿತ ಪುಣೆ ಫಿಲ್ಮ್  ಇನ್ಸಿಟ್ಯೂಟ್ ಅಧ್ಯಕ್ಷ ಸ್ಥಾನ ಕೊಟ್ಟಿದ್ದು ಯಾಕೆ ಎಂದು ಆರ್‌ಟಿಐ ಪ್ರಶ್ನೆ ಕೇಳಿದ್ದಕ್ಕೆ ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯ ಈ ರೀತಿಯ ಉತ್ತರ ನೀಡಿದೆ.

ಚೌಹಾಣ್ ಅವರು ಮಹಾಭಾರತ ಧಾರವಾಹಿಯಲ್ಲಿ ಯುಧಿಷ್ಠಿರನಾಗಿ ಅಭಿನಯಿಸಿದ್ದಾರೆ. 150ಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ, 600ಕ್ಕಿಂತಲೂ ಹೆಚ್ಚು ಧಾರವಾಹಿಗಳಲ್ಲಿ ಪಾತ್ರ ಮಾಡಿದ್ದಾರೆ. ಇದಿಷ್ಟೇ ಚೌಹಾಣ್ ಅವರ ಬಯೋಡಾಟಾದಲ್ಲಿ ಇರುವ ಮಾಹಿತಿ. ಆರ್‌ಟಿಐ ಯಲ್ಲಿ  ಚೌಹಾಣ್‌ರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಯಾಕೆ ಎಂದು ಪ್ರಶ್ನೆ ಕೇಳಿದಾಗ ಸಿಗುವ ಉತ್ತರವೂ ಇಷ್ಟೇ ಆಗಿದೆ.  

ಅಡೂರ್ ಗೋಪಾಲಕೃಷ್ಣನ್, ಅಮಿತಾಬ್ ಬಚ್ಚನ್, ರಜನೀಕಾಂತ್, ವಿನೋದ್ ಚೋಪ್ರಾ ಮೊದಲಾವರು ಪುಣೆ ಫಿಲ್ಮ್ ಇನ್ಸಿಟ್ಯೂಟ್‌ನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಅಂಥಾ ಸಾಧಕರು ಕುಳಿತುಕೊಂಡ ಅಧ್ಯಕ್ಷ ಸ್ಥಾನಕ್ಕೆ ಗಜೇಂದ್ರ ಚೌಹಾಣ್ ರನ್ನು ಆಯ್ಕೆ ಮಾಡಲು ಕಾರಣಗಳೇನು ? ಎಂಬುದರ ಬಗ್ಗೆ ಭಾರಿ ಪ್ರಶ್ನೆಗಳೆದ್ದಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.