ಮೇಕ್ ಇನ್ ಇಂಡಿಯಾಗೆ ಭಾರಿ ಯಶಸ್ಸು
ಪ್ರಧಾನಿ ಮೋದಿ ಅವರ ಕನಸಿನ `ಮೇಕ್ ಇನ್ ಇಂಡಿಯಾ'ಗೆ ಫ್ರಾನ್ಸ್ ನಲ್ಲಿ ಭಾರಿ ಯಶಸ್ಸು.ರಫೇಲ್ ಯುದ್ಧ ವಿಮಾನ ಒಪ್ಪಂದ ಏರ್ಪಟ್ಟ ಬೆನ್ನಲ್ಲೇ ಫ್ರಾನ್ಸ್ ನ ವಿಮಾನ ಉತ್ಪಾದಕ ಸಂಸ್ಥೆ ಏರ್‍ಬಸ್ ಕೂಡ ಭಾರತದಲ್ಲಿ...

5 ವರ್ಷಗಳಲ್ಲಿ ಶೇ.500ರಷ್ಟು ವ್ಯವಹಾರ ಹೆಚ್ಚಿಸುತ್ತೇವೆಂದ ಏರ್‍ಬಸ್
ಟುಲೌಸ್(ಫ್ರಾನ್ಸ್): ಪ್ರಧಾನಿ ಮೋದಿ ಅವರ ಕನಸಿನ `ಮೇಕ್ ಇನ್ ಇಂಡಿಯಾ'ಗೆ ಫ್ರಾನ್ಸ್ ನಲ್ಲಿ ಭಾರಿ ಯಶಸ್ಸು.ರಫೇಲ್ ಯುದ್ಧ ವಿಮಾನ ಒಪ್ಪಂದ ಏರ್ಪಟ್ಟ ಬೆನ್ನಲ್ಲೇ ಫ್ರಾನ್ಸ್ ನ ವಿಮಾನ ಉತ್ಪಾದಕ ಸಂಸ್ಥೆ ಏರ್‍ಬಸ್ ಕೂಡ ಭಾರತದಲ್ಲಿ ಹೂಡಿಕೆಯ ವಾಗ್ದಾನ ಮಾಡಿದೆ. ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿನ ಹೊರಗುತ್ತಿಗೆಯನ್ನು ಈಗಿರುವ ರು. 2,490 ಕೋಟಿಯಿಂದ ರು.12,400 ಕೋಟಿಗೇರಿಸುವುದಾಗಿ ಸಂಸ್ಥೆ ಘೋಷಿಸಿದೆ. ಇದು ಮೇಕ್ ಇನ್ ಇಂಡಿಯಾಗೆ ಸಿಕ್ಕಿದ ಭಾರಿ ಕೊಡುಗೆಯೆಂದೇ ಹೇಳಬಹುದು.
ಇದೇ ವೇಳೆ, ಶನಿವಾರ ಪ್ರಧಾನಿ ಮೋದಿ ಅವರು ಫ್ರಾನ್ಸ್ ನ ಸಿಎನ್‍ಇಎಸ್ ಬಾಹ್ಯಾಕಾಶ ಸಂಸ್ಥೆಗೂ ಭೇಟಿ ನೀಡಿದರು. ಮೊದಲ ವಿಶ್ವಯುದ್ಧದಲ್ಲಿ ಮಡಿದ ಭಾರತೀಯ ಯೋಧರಿಗೆ ಗೌರವ ಸಲ್ಲಿಸಿದರು. ಇಲ್ಲಿದ್ದ ಭಾರತೀಯ ವಿದ್ಯಾರ್ಥಿಗಳು ಮೋದಿ ಜತೆ ಸಂವಾದ ನಡೆಸಿದ್ದಲ್ಲದೆ, ಅವರೊಂದಿಗೆ ನಿಂತು ಸೆಲ್ಫೀ ತೆಗೆದುಕೊಂಡರು. ಭಾರತದಲ್ಲಿ ಭಾರತಕ್ಕಾಗಿ ಫ್ರಾನ್ಸ್ ಪ್ರವಾಸದ 2ನೇ ದಿನವಾದ ಶನಿವಾರ ಪ್ರಧಾನಿ ಮೋದಿ ಏರ್‍ಬಸ್ ಘಟಕಕ್ಕೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಏರ್‍ಬಸ್ ಗ್ರೂಪ್ ಸಿಇಒ ಟಾಮ್ ಎಂಡರ್ಸ್, ನಮ್ಮ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಭಾರತವು ಪ್ರಮುಖ ಪಾತ್ರವಹಿಸಿದೆ.
ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಕರೆಗೆ ಓಗೊಟ್ಟು, ನಾವು ಭಾರತದಲ್ಲಿ, ಭಾರತಕ್ಕಾಗಿ ಮತ್ತು ವಿಶ್ವಕ್ಕಾಗಿ ಉತ್ಪಾದನೆ ಮಾಡಲು ಸಿದ್ಧರಾಗಿದ್ದೇವೆ ಎಂದಿದ್ದಾರೆ. ಜತೆಗೆ, ಭಾರತದಲ್ಲಿನ ನಮ್ಮ ವಹಿವಾಟು ಮುಂದಿನ 5 ವರ್ಷಗಳಲ್ಲಿ ಶೇ.500ರಷ್ಟು ಹೆಚ್ಚಲಿದೆ ಎಂದೂ ಹೇಳಿದ್ದಾರೆ. ದೆಹಲಿ-ಚಂಡೀಗಡ ರೈಲ್ವೆ ಲೈನ್‍ನ ವೇಗವನ್ನು ಗಂಟೆಗೆ 200 ಕಿ.ಮೀ ಹೆಚ್ಚಿಸುವ ಮತ್ತು ಅಂಬಾಲಾ, ಲುಧಿಯಾನಾ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಭಾರತದೊಂದಿಗೆ ಫ್ರಾನ್ಸ್ ಕೈಜೋಡಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


