ಮೂತ್ರದ ಟೀ ಕುಡಿಸಿದ ಪತ್ನಿ
ವರದಕ್ಷಿಣೆ ಕಿರುಕುಳ, ಅತ್ತೆ ಸೊಸೆ ಜಗಳದ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಆದರೆ ಇಲ್ಲೊಂದು ಪ್ರಕರಣ ವಿಚಿತ್ರವಾದದ್ದು...

ಇಂದೋರ್: ವರದಕ್ಷಿಣೆ ಕಿರುಕುಳ, ಅತ್ತೆ ಸೊಸೆ ಜಗಳದ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಆದರೆ ಇಲ್ಲೊಂದು ಪ್ರಕರಣ ವಿಚಿತ್ರವಾದದ್ದು.
ಒಲ್ಲದೇ ಮದುವೆಯಾಗಿ ತವರು ಸೇರಿದ್ದ ಪತ್ನಿಯನ್ನು ಪತಿರಾಯ ಹಾಗೂ ಹೀಗೂ ಮಾಡಿ ಮನವೊಲಿಸಿ ಮನೆಗೆ ಕರೆ ತಂದಿದ್ದ. ಆದರೂ ಆಕೆ ಸೇಡು ತೀರಿಸಿಕೊಳ್ಳಲು ಮುಂದಾದಳು. ಅದೂ ಹೇಗೆ ಗೊತ್ತೇ ಪ್ರತಿ ದಿನ ಕುಟುಂಬ ಸದಸ್ಯರಿಗೆ ನೀಡುವ ಚಹಾದಲ್ಲಿ ತನ್ನ ಮೂತ್ರ ಬೆರೆಸುವ ಮೂಲಕ. ಒಂದು ಹಂತದಲ್ಲಿ ಪ್ರಕರಣ ಬಯಲಾಯಿತು. ರೊಚ್ಚಿಗೆದ್ದ ಪತಿ ಮನೆಯವರು ಕೇಸು ನೀಡಿದ್ದು, ಕೋರ್ಟ್‍ನಲ್ಲಿ ಪ್ರಕರಣ ನಡೆಯುತ್ತಿದೆ.
ಏನಿದು ವಿವಾದ?: ಮಧ್ಯಪ್ರದೇಶದ ಇಂದೋರ್ ನಲ್ಲಿ ಈ ವಿಲಕ್ಷಣ ಪ್ರಕರಣ ನಡೆದಿದೆ. 2007ರಲ್ಲಿ ದೀಪಕ್ ಮತ್ತು ರೇಖಾ ಎಂಬುವರ ವಿವಾಹ ನಡೆ
ದಿತ್ತು. ವಾಸ್ತವವಾಗಿ ರೇಖಾಗೆ ಈ ಸಂಬಂಧ ಇಷ್ಟವಿರಲೇ ಇಲ್ಲ. ಹಾಗೂ ಹೀಗೂ ಮದುವೆ ನಡೆದು ರೇಖಾ ಪತಿ ಮನೆ ಸೇರಿದಳು. ಪತಿ ಜತೆ ಮುನಿಸಿಕೊಂಡು ರೇಖಾ ತವರು ಮನೆ ಸೇರಿದಳು. ಕೊನೆಗೆ ಹಲವು ಕಠಿಣ ಷರತ್ತುಗಳೊಂದಿಗೆ ಮನೆಗೆ ವಾಪಸಾಗಿದ್ದಳು .
ಷರತ್ತುಗಳೇನು ಗೊತ್ತೇ? ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಹಾಗೂ ಪತ್ನಿ ಪಾದಗಳಿಗೆ ಪ್ರತಿ ರಾತ್ರಿ ಮಸಾಜ್!
ಬಯಲಾಯಿತು ರಹಸ್ಯ: ಸೊಸೆಯ ಚರ್ಯೆಗೆ ದೀಪಕ್ ಹೆತ್ತವರು ಆಕ್ಷೇಪಿಸುತ್ತಿದ್ದರು. ಇದರಿಂದ ಕ್ರುದ್ಧ ರೇಖಾ ಎಲ್ಲರಿಗೆ ಚಹಾದಲ್ಲಿ ಮೂತ್ರ ಬೆರೆಸಿ ನೀಡಲಾರಂಭಿಸಿ ಸಿಕ್ಕಿಬಿದ್ದಳು. `ನಿಮ್ಮೆಲ್ಲರನ್ನು ಸಮ್ಮೋಹನಗೊಳಿಸಲೆಂದೇ ಈ ರೀತಿ ಮಾಡುತ್ತಿದ್ದೆ' ಎಂದು ಸಮರ್ಥನೆ ನೀಡಿದಳು. ದೀಪಕ್‍ನ ಹೆತ್ತವರು ಕೋರ್ಟ್‍ಗೇ ದೂರಿತ್ತರು. ಇದೀಗ ಇಂದೋರ್‍ನ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


