ಸೌದಿಯಿಂದ ಬಂದ ಭಾರತೀಯನ ಶವದಲ್ಲಿ ಪ್ರಮುಖ ಅಂಗಾಂಗಳೇ ಇಲ್ಲ..!
ಸೌದಿ ಅರೇಬಿಯಾದಲ್ಲಿ ಕಳೆದ 10 ತಿಂಗಳ ಹಿಂದ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಘಾಜಿಪುರದ ವ್ಯಕ್ತಿಯೊಬ್ಬರ ದೇಹವನ್ನು ಭಾರತಕ್ಕೆ ತರಲಾಗಿದ್ದು...

ವಾರಣಾಸಿ: ಸೌದಿ ಅರೇಬಿಯಾದಲ್ಲಿ ಕಳೆದ 10 ತಿಂಗಳ ಹಿಂದ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಘಾಜಿಪುರದ ವ್ಯಕ್ತಿಯೊಬ್ಬರ ದೇಹವನ್ನು ಭಾರತಕ್ಕೆ ತರಲಾಗಿದ್ದು, ದೇಹದಲ್ಲಿನ ಪ್ರಮುಖ ಅಂಗಗಳು ನಾಪತ್ತೆಯಾಗಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಕೆಲಸವನ್ನರಿಸಿಕೊಂಡು ದುಬೈಗೆ ಹೋಗಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ವಾರಣಾಸಿಯ ಘಾಜಿಪುರ್ ಜಿಲ್ಲೆಯ ರಾಮ್‌ದಿನ್ ರಾಜ್‌ಭರ್ ಮೃತದೇಹ ಭಾರತಕ್ಕೆ ಬಂದಿದೆ. ಆದರೆ ಆಘಾತಕಾರಿ ಅಂಶವೆಂದರೆ ರಾಜ್ ಭರ್ ದೇಹದ ಮರಣೋತ್ತರ ಪರೀಕ್ಷೆ ವೇಳೆ ದೇಹದ ಪ್ರಮುಖ ಅಂಗಗಳೇ ನಾಪತ್ತೆಯಾಗಿರುವುದು ಕಂಡುಬಂದಿದೆ. ಹೀಗಾಗಿ ಘಟನೆ ಕುರಿತಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮಧ್ಯೆ ಪ್ರವೇಶಿಸಿ ಕ್ರಮಕೈಗೊಳ್ಳಬೇಕು ಎಂದು ಘಾಜಿಪುರ್ ಗ್ರಾಮದ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರು ಒತ್ತಾಯಿಸಿದ್ದಾರೆ.
ಘಟನೆ ವಿವರ
ರಾಮ್‌ದಿನ್ ರಾಜ್‌ಭರ್ ಎಂಬ ವ್ಯಕ್ತಿ 2013ರಲ್ಲಿ ಸೌದಿ ಅರೇಬಿಯಾಗೆ ಹೋಗಿದ್ದನು. ಅಲ್ಲಿ ಅಲ್ ಖಫಿಜಿ ನಗರದಲ್ಲಿ ಉದ್ಯೋಗ ಮಾಡುತ್ತಿದ್ದನು. ಏಳು ತಿಂಗಳ ನಂತರ ಅಂದರೆ ಏಪ್ರಿಲ್30, 2014ರಲ್ಲಿ ತನ್ನ ಪತ್ನಿಗೆ ದೂರವಾಣಿ ಕರೆ ಮಾಡಿದ್ದ ರಾಜ್ ಭರ್, ನನ್ನನ್ನು ಸಂಸ್ಥೆಯ ಮಾಲೀಕ ಕೊಲ್ಲಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಿದ್ದ. ಇದಾದ ಬಳಿಕ ರಾಜ್ ಭರ್ ತನ್ನ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದ. ನಂತರ ರಾಜ್ ಭರ್ ಅವರ ಮೃತದೇಹವನ್ನು ಇದೇ ಫೆಬ್ರವರಿಯಲ್ಲಿ ಭಾರತಕ್ಕೆ ತರಲಾಗಿತ್ತು. ಬಳಿಕ ಘಾಜಿಪುರ ಆಸ್ಪತ್ರೆಯೊಂದರಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿದಾಗ ದೇಹದಲ್ಲಿನ ಕೆಲ ಪ್ರಮುಖ ಅಂಗಗಳು ನಾಪತ್ತೆಯಾಗಿರುವುದು ಕಂಡುಬಂದಿದೆ. ಘಟನೆ ಕುರಿತಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರಾದ ದುಬೇ ಎಂಬುವವರು ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


