ದೇಶ

ಚುಡಾಯಿಸಿದವರಿಗೆ ಬೆಲ್ಟ್ ಬಿಚ್ಚಿ ಬಾರಿಸಿದ ಸಹೋದರಿಯರು!

ಸಾರ್ವಜನಿಕ ಸ್ಥಳದಲ್ಲಿ ತಮ್ಮ ಜತೆ ಅಸಭ್ಯವಾಗಿ ವರ್ತಿಸಿದ ಪೋಕರಿಗಳಿಗೆ ಸಹೋದರಿಯರೇ...

ಚುಡಾಯಿಸಿದವರಿಗೆ ಬೆಲ್ಟ್ ಬಿಚ್ಚಿ ಬಾರಿಸಿದ ಸಹೋದರಿಯರು!
ಹರ್ಯಾಣದ ರೋಹ್‌ತಕ್ ಸರ್ಕಾರಿ ಬಸ್‌ನಲ್ಲಿ ಪೋಕರಿಗಳ ಅಸಭ್ಯ ವರ್ತನೆ
Published On :

ರೋಹ್‌ತಕ್(ಹರ್ಯಾಣ): ಸಾರ್ವಜನಿಕ ಸ್ಥಳದಲ್ಲಿ ತಮ್ಮ ಜತೆ ಅಸಭ್ಯವಾಗಿ ವರ್ತಿಸಿದ ಪೋಕರಿಗಳಿಗೆ ಸಹೋದರಿಯರೇ ತಕ್ಕ ಪಾಠ ಕಲಿಸಿದ ಪ್ರಸಂಗ ಇದು!

ಈ ಪ್ರಸಂಗ ನಡೆದದ್ದು ಹರ್ಯಾಣದಲ್ಲಿ. ಕಾಲೇಜಿಗೆಂದು ತಮ್ಮ ಹಳ್ಳಿಯಿಂದ ರೋಹ್‌ತಕ್‌ಗೆ ಸರ್ಕಾರಿ ಬಸ್‌ನಲ್ಲಿ ತೆರಳುತ್ತಿದ್ದ ಸಹೋದರಿಯರನ್ನು ಮೂವರು ಯುವಕರು ಚುಡಾಯಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಒಬ್ಬಾತ ಯುವತಿಯರು ಎನ್ನುವುದನ್ನೂ ನೋಡದೆ ಹಲ್ಲೆ ನಡೆಸಿದ್ದಾನೆ.

ಈ ವೇಳೆ ಬಸ್‌ನಲ್ಲಿ ಇದ್ದ ಯಾರೊಬ್ಬರೂ ನೆರವಿಗೆ ಬಾರಲಿಲ್ಲ. ಆಗ ಈ ಯುವತಿಯರೇ ಪೋಕರಿಗಳಿಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿದರು. ಸಹೋದರಿಯರಲ್ಲಿ ಒಬ್ಬಾಕೆ ತನ್ನ ಬೆಲ್ಟ್ ಬಿಚ್ಚಿ ಮೂವರಿಗೂ ಮನಸೋ ಇಚ್ಛೆ ಬಾರಿಸಿದ್ದಾಳೆ.

ಇಡೀ ಪ್ರಸಂಗವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯುವತಿಯರ ಹೆತ್ತವರು ದೂರು ದಾಖಲಿಸಿದ್ದಾರೆ. ಭಾನುವಾರ ತಡ ರಾತ್ರಿ ಮೂವರು ಕೀಚಕರನ್ನು ರೋಹ್‌ತಕ್ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಸೋಮವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.