ರಾಂಪಾಲ್ ಆಶ್ರಮದ ಲಾಕರ್‌ಗಳಲ್ಲಿ ಕಮಾಂಡೋ ಸಮವಸ್ತ್ರ..!
ವಿವಾದಿತ ಸ್ವಯಂ ಘೋಷಿತ ದೇವಮಾನವ ಬಾಬಾ ರಾಂಪಾಲ್‌ನ ಆಶ್ರಮದಲ್ಲಿನ ಲಾಕರ್‌ಗಳಲ್ಲಿ ಶಸ್ತ್ರಾಸ್ತ್ರಗಳು ಮತ್ತು ಕಮಾಂಡೋ ಸಮವಸ್ತ್ರಗಳು ದೊರೆತಿವೆ..

ಹಿಸ್ಸಾರ್: ವಿವಾದಿತ ಸ್ವಯಂ ಘೋಷಿತ ದೇವಮಾನವ ಬಾಬಾ ರಾಂಪಾಲ್‌ನ ಆಶ್ರಮದಲ್ಲಿನ ಲಾಕರ್‌ಗಳಲ್ಲಿ ಶಸ್ತ್ರಾಸ್ತ್ರಗಳು ಮತ್ತು ಕಮಾಂಡೋ ಸಮವಸ್ತ್ರಗಳು ದೊರೆತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಿನ್ನೆಯಷ್ಟೇ ಬಾಬಾ ರಾಂಪಾಲ್ ಸಾತ್‌ಲೋಕ್ ಆಶ್ರಮದಲ್ಲಿನ ವಿಶೇಷ ಕೊಠಡಿಗಳಲ್ಲಿರುವ ಲಾಕರ್‌ಗಳನ್ನು ತೆರೆದಿದ್ದು, ಲಾಕರ್‌ಗಳಲ್ಲಿ ಶಸ್ತ್ರಾಸ್ತ್ರಗಳು, ಕಮಾಂಡೋ ಸಮವಸ್ತ್ರಗಳು ಮತ್ತು ಬುಲೆಟ್ ಪ್ರೂಫ್ ಜಾಕೆಟ್‌ಗಳು ಪತ್ತೆಯಾಗಿವೆ. ಈ ಬಗ್ಗೆ ಮಾತನಾಡಿರುವ ಹರ್ಯಾಣ ಪೊಲೀಸ್ ವರಿಷ್ಠಾಧಿಕಾರಿ ಎಕೆ ರಾವ್ ಅವರು, ಲಾಕರ್‌ಗಳಲ್ಲಿ ಪತ್ತೆಯಾದ ಕಮಾಂಡೋ ಸಮವಸ್ತ್ರಗಳು ಮತ್ತು ಬುಲೆಟ್ ಪ್ರೂಫ್ ಜಾಕೆಟ್‌ಗಳ ಬಗ್ಗೆ ರಾಂಪಾಲ್‌ನನ್ನು ವಿಚಾರಿಸಲಾಗಿದೆ ಎಂದು ಹೇಳಿದರು.
ಪೊಲೀಸ್ ಬಂಧನ ವಿಚಾರ ತಿಳಿದ ರಾಂಪಾಲ್ ಬೆಂಬಲಿಗರು ಪೊಲೀಸರ ವಿರುದ್ಧ ದಾಳಿ ನಡೆಸಲು ಈ ಎಲ್ಲ ಪರಿಕರಗಳನ್ನು ಸಂಗ್ರಹಿಸಿದ್ದರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಇದ್ದರೂ ಇರಬಹುದು ಅಥವಾ ರಾಂಪಾಲ್‌ಗಿರುವ ಬಾಹ್ಯ ಬೆದರಿಕೆಯಿಂದಾಗಿ ಆತ ತನ್ನದೇ ಆದ ಕಮಾಂಡೋಗಳನ್ನು ನಿಯೋಜಿಸಿಕೊಂಡಿರಬಹುದು' ಎಂದು ಹೇಳಿದ್ದಾರೆ.
ವಿವಾದಿತ ಸ್ವಯಂಘೋಷಿತ ದೇವಮಾನವ ಬಾಬಾ ರಾಂಪಾಲ್‌ನನ್ನು ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಸತತ ಕಾರ್ಯಾಚರಣೆ ಬಳಿಕ ಬಂಧಿಸಲಾಗಿತ್ತು. ಬಂಧನದ ಬಳಿಕ ಹರ್ಯಾಣ ಹೈಕೋರ್ಟ್ ರಾಂಪಾಲ್‌ನನ್ನು 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಸಾತ್‌ಲೋಕ್ ಆಶ್ರಮದಲ್ಲಿ ಅನುಮಾನಾಸ್ಪದ ಲಾಕರ್‌ಗಳು ಕಂಡು ಬಂದ ಹಿನ್ನಲೆಯಲ್ಲಿ ನಿನ್ನೆಯಷ್ಟೇ ವಿಶೇಷ ತನಿಖಾ ದಳದ ಪೊಲೀಸ್ ಅಧಿಕಾರಿಗಳು ರಾಂಪಾಲ್‌ನನ್ನು ಆಶ್ರಮಕ್ಕೆ ಕರೆತಂದು ಲಾಕರ್‌ಗಳನ್ನು ತೆರೆಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


